varthabharthi


ರಾಷ್ಟ್ರೀಯ

ಮುಲಾಯಂ ಸಿಂಗ್ ಯಾದವ್ ಸಂಬಂಧಿ, ಮಾಜಿ ಶಾಸಕ ಪ್ರಮೋದ್ ಗುಪ್ತಾ ಬಿಜೆಪಿಗೆ ಸೇರ್ಪಡೆ

ವಾರ್ತಾ ಭಾರತಿ : 20 Jan, 2022

Photo credit: indiatoday.in

ಲಕ್ನೊ: ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಸಂಬಂಧಿ, ಉತ್ತರ ಪ್ರದೇಶದ ಮಾಜಿ ಶಾಸಕ ಪ್ರಮೋದ್ ಗುಪ್ತಾ ಗುರುವಾರ ಬಿಜೆಪಿ ಸೇರಿದರು. ಪ್ರಮೋದ್ ಗುಪ್ತಾ ಅವರು ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ಅವರ ಸೋದರ ಮಾವ. ಮುಲಾಯಂ ಸಿಂಗ್ ಅವರ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರನ್ನು ಮೂಲೆಗೆ ತಳ್ಳಿದ್ದಾರೆ ಎಂದು ಆರೋಪಿಸಿದ ಪ್ರಮೋದ್ ಗುಪ್ತಾ, ಪ್ರಸ್ತುತ ಪಕ್ಷದೊಳಗೆ ಅವರ ಸ್ಥಿತಿ ತುಂಬಾ ಕೆಟ್ಟದ್ದಾಗಿದೆ ಎಂದು ಹೇಳಿದರು.

"ಅಪರಾಧಿಗಳು ಮತ್ತು ಜೂಜುಕೋರರನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ" ಎಂದೂ ಅವರು ಆರೋಪಿಸಿದರು.

ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣಾ ಫಲಿತಾಂಶವನ್ನು ಮಾರ್ಚ್ 10 ರಂದು ಪ್ರಕಟಿಸಲಾಗುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)