varthabharthi


ರಾಷ್ಟ್ರೀಯ

'ಲಡ್ಕಿ ಹೂ, ಲಡ್ ಸಕ್ತಿ ಹೂ' ಎಂಬ ಕಾಂಗ್ರೆಸ್ ಪ್ರಚಾರದ 'ಪೋಸ್ಟರ್ ಗರ್ಲ್' ಪ್ರಿಯಾಂಕಾ ಮೌರ್ಯ ಬಿಜೆಪಿಗೆ ಸೇರ್ಪಡೆ

ವಾರ್ತಾ ಭಾರತಿ : 20 Jan, 2022

Photo: Twitter/ @ANINewsUP

ಲಕ್ನೊ: 'ಲಡ್ಕಿ ಹೂ, ಲಡ್ ಸಕ್ತಿ ಹೂ'(ನಾನು ಹುಡುಗಿ ಹಾಗೂ ನಾನು ಹೋರಾಡ ಬಲ್ಲೆ) ಅಭಿಯಾನದ ಕಾಂಗ್ರೆಸ್ ಪ್ರಚಾರದ 'ಪೋಸ್ಟರ್ ಗರ್ಲ್' ಪ್ರಿಯಾಂಕಾ ಮೌರ್ಯ ಗುರುವಾರ ಲಕ್ನೋದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಸರೋಜಿನಿ ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ್ದಕ್ಕೆ ಬೇಸರಗೊಂಡಿರುವ ಪ್ರಿಯಾಂಕಾ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತರು ತನ್ನಿಂದ ಲಂಚ ಕೇಳಿದ್ದರು ಎಂದು ಆರೋಪಿಸಿದ್ದಾರೆ.

ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಸಂಬಂಧಿ ಪ್ರಮೋದ್ ಗುಪ್ತಾ ಕೂಡ ಗುರುವಾರ ಬಿಜೆಪಿಗೆ ಸೇರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)