varthabharthi


ಅಂತಾರಾಷ್ಟ್ರೀಯ

ಲಾಹೋರ್‌: ಮಾರುಕಟ್ಟೆಯಲ್ಲಿ ಬಾಂಬ್‌ ಸ್ಪೋಟ; ಮೂವರು ಮೃತ್ಯು, 20ಕ್ಕೂ ಅಧಿಕ ಮಂದಿಗೆ ಗಾಯ

ವಾರ್ತಾ ಭಾರತಿ : 20 Jan, 2022

Photo: Twitter

ಲಾಹೋರ್‌: ಪಾಕಿಸ್ತಾನದ ಲಾಹೋರ್‌ನ  ಜನನಿಬಿಡ  ಮಾರುಕಟ್ಟೆಯಲ್ಲಿ ಗುರುವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

" ಮೋಟಾರುಬೈಕಿನಲ್ಲಿದ್ದ ಟೈಮ್‌ ಬಾಂಬ್‌  ಸ್ಫೋಟಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ" ಎಂದು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ಸುದ್ದಿ ಸಂಸ್ಥೆ AFP ಗೆ ತಿಳಿಸಿದ್ದಾರೆ.

ಭಾರತೀಯ ಸರಕುಗಳನ್ನು ಮಾರಾಟ ಮಾಡುವ ಲಾಹೋರ್‌ನ ಪ್ರಸಿದ್ಧ ಅನಾರ್ಕಲಿ ಮಾರುಕಟ್ಟೆಯಲ್ಲಿರುವ ಈ ಸ್ಫೋಟ ಸಂಭವಿಸಿದೆ.

ಇದುವರೆಗೂ ಯಾವುದೇ ಸಂಘಟನೆಗಳು ಹೊಣೆಗಾರಿಕೆ ವಹಿಸಿಕೊಂಡಿಲ್ಲ ಎಂದು ವರದಿಯಾಗಿದೆ.

"ನಾವು ಸ್ಫೋಟದ ಸ್ವರೂಪವನ್ನು ಪರಿಶೀಲಿಸುತ್ತಿದ್ದೇವೆ. ಸ್ಫೋಟದಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ" ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್  ಡಾ. ಮೊಹಮ್ಮದ್ ಅಬಿದ್ ಸ್ಫೋಟದ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)