varthabharthi


ಕರ್ನಾಟಕ

ಗಣರಾಜ್ಯೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ರದ್ದು: ಕಲಾವಿದರ ಒಕ್ಕೂಟ ವಿರೋಧ

ವಾರ್ತಾ ಭಾರತಿ : 20 Jan, 2022

ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.20: ಗಣರಾಜ್ಯೋತ್ಸವದ ನಿಮಿತ್ತ ಇದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಕಾರ ರದ್ದುಗೊಳಿಸುವುದರ ವಿರುದ್ಧ ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟ ವಿರೋಧಿಸಿದೆ. 

ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಕಲಾವಿದ ಜೋಗಿಲ ಸಿದ್ದರಾಜು ಅವರು, ಕಳೆದ 2 ವರ್ಷಗಳಿಂದ ಸಾಂಸ್ಕøತಿಕ ಚಟುವಟಿಕೆಗಳು ನಿಂತು ವೃತ್ತಿಪರ ಕಲಾವಿದರ ಮಕ್ಕಳ ಬದುಕು, ವಿದ್ಯಾಭ್ಯಾಸ, ಸಂಕಷ್ಟಕ್ಕೊಳಗಾಗಿದೆ. ಈ ಕಾರ್ಯಕ್ರಮದಿಂದ ಸುಮಾರು 1,500 ಜನ ಕಲಾವಿದರಿಗೆ ಅವಕಾಶ ಸಿಗುತ್ತಿತ್ತು ಹಾಗೂ 800 ಕುಟುಂಬಗಳಿಗೆ ಸಹಾಯವಾಗುತ್ತಿತ್ತು. ದಿಢೀರನೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರದ್ದುಪಡಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ ಎಂದರು.

ಈಗಾಗಲೇ ಎಲ್ಲ ವಲಯಗಳಲ್ಲೂ ಕರ್ನಾಟಕ ಸರಕಾರದ ನಿಯಮದಂತೆ 50:50 ಅನುಪಾತದಲ್ಲಿ ಎಲ್ಲ ವಿಧದ ಚಟುವಟಿಕೆಗಳು ಚಿತ್ರಮಂದಿರಗಳು, ಮಾಲ್‍ಗಳು, ಮಾರ್ಕೆಟ್‍ಗಳು, ಧಾರ್ಮಿಕ ಕೇಂದ್ರಗಳು ಸೇರಿ ಅನೇಕ ವಲಯಗಳಿಗೆ ಅವಕಾಶ ಕೊಡಲಾಗಿದೆ. ಆದರೆ, ಕರ್ನಾಟಕ ರಂಗಭೂಮಿ, ಸಂಗೀತ, ಯಕ್ಷಗಾನ, ಜನಪದ ಕಲಾವಿದರು ಪ್ರದರ್ಶನ ನೀಡದಂತೆ ಕಾರ್ಯಕ್ರಮ ನಡೆಸದಂತೆ ಆದೇಶಿಸಲಾಗಿದೆ. 

ಇದರಿಂದ, ವೃತ್ತಿಪರ ಕಲಾವಿದರಿಗೆ ಕಾರ್ಯಕ್ರಮವಿಲ್ಲದೆ ಜೀವನ ನಿರ್ವಹಣೆ ದುಸ್ತರವಾಗಿದೆ ಮತ್ತು ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಹೀಗಾಗಿ, ತಮ್ಮ ನಿಯಮದಂತೆ 50:50 ಅನುಪಾತದಲ್ಲಿ ಗಣರಾಜ್ಯೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಬೆಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿಕೊಂಡರು. 

ಕಲಾವಿದರಾದ ಪದ ದೇವರಾಜ್, ಜಗದೀಶ್ ಜಾಲ, ಎಂ.ಎಸ್.ಗುಣಶೀಲ, ಶ್ರೀನಾಥ್ ಉಪಸ್ಥಿತರಿದ್ದರು.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)