ಮಗು ಸಹಿತ ಪತಿ ನಾಪತ್ತೆ: ದೂರು
ಮಂಗಳೂರು, ಜ.20: ಪಣಂಬೂರು ಫಲ್ಗುಣಿ ನದಿ ತೀರದ ಗುಡಿಸಲಿನಲ್ಲಿದ್ದ ಗಿರೀಶ್ ಎಂಬಾತ ತನ್ನ ನಾಲ್ಕು ವರ್ಷ ಪ್ರಾಯದ ಮಗುವಿನ ಸಮೇತ ನಾಪತ್ತೆಯಾಗಿದ್ದಾರೆ ಎಂದು ಕಾವೇರಿ ಎಂಬವರು ದೂರು ನೀಡಿದ್ದಾರೆ.
ಜ.19ರಂದು ಮುಂಜಾವ ಸುಮಾರು 3:30ಕ್ಕೆ ಗುಡಿಸಲಿನಲ್ಲಿದ್ದ ಪತಿ ಗಿರೀಶ್ ತನ್ನ ನಾಲು ವರ್ಷ ಪ್ರಾಯದ ಮಗುವನ್ನು ಕರೆದೊಯ್ದಿದ್ದು, ಬಳಿಕ ಕಾಣೆಯಾಗಿದ್ದಾರೆ ಎಂದು ಕಾವೇರಿ ದೂರಿನಲ್ಲಿ ತಿಳಿಸಿದ್ದಾರೆ.
27ರ ಹರೆಯದ ಗಿರೀಶ್ ಸುಮಾರು 5.3 ಅಡಿ ಎತ್ತರವಿದ್ದು, ನಾಪತ್ತೆಯಾದಾಗ ನೀಲಿ ಬಣ್ಣದ ಬರ್ಮುಡ ಮತ್ತು ತಿಳಿ ಹಸಿರು ಬಣ್ಣದ ಉದ್ದ ತೋಳಿನ ಅಂಗಿ ಧರಿಸಿದ್ದಾರೆ. ಇವರನ್ನು ಕಂಡವರು ಪಣಂಬೂರು (0824-2220530/9480805355/9480805331) ಅಥವಾ ಮಂಗಳೂರು ನಗರ ಪೊಲೀಸ್ ಕಂಟ್ರೋಲ್ ರೂಮ್ (0824-2220800)ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
Next Story