varthabharthi


ರಾಷ್ಟ್ರೀಯ

ಅಬುಧಾಬಿ: ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯರ ಪಾರ್ಥಿವ ಶರೀರ ಇಂದು ಪಂಜಾಬ್ ಗೆ ರವಾನೆ

ವಾರ್ತಾ ಭಾರತಿ : 21 Jan, 2022

Photo: Twitter

ಅಬುಧಾಬಿ: ಸೋಮವಾರ ಅಬುಧಾಬಿಯಲ್ಲಿ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯ ಪ್ರಜೆಗಳ ಪಾರ್ಥಿವ ಶರೀರ ಶುಕ್ರವಾರ ಪಂಜಾಬ್ ತಲುಪಲಿದೆ ಎಂದು ಯುಎಇಯಲ್ಲಿನ ಭಾರತದ ರಾಯಭಾರಿ ತಿಳಿಸಿದ್ದಾರೆ.

ಜನವರಿ 17 ರಂದು ಅಬುಧಾಬಿ ವಿಮಾನ ನಿಲ್ದಾಣದ ಬಳಿ ಶಂಕಿತ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಹಾಗೂ  ಒಬ್ಬ ಪಾಕಿಸ್ತಾನಿ ಪ್ರಜೆ ಸೇರಿದಂತೆ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ (ADNOC) ಮೂವರು ಸಿಬ್ಬಂದಿ ಸಾವನ್ನಪ್ಪಿದರು ಹಾಗೂ ಆರು ಮಂದಿ ಗಾಯಗೊಂಡಿದ್ದರು.

ಯುಎಇಯ ರಾಜಧಾನಿಯಲ್ಲಿರುವ ಭಾರತೀಯ ಮಿಷನ್ ಇಬ್ಬರು ಭಾರತೀಯರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದೆ ಎಂದು ಯುಎಇಯ ಭಾರತದ ರಾಯಭಾರಿ ಸಂಜಯ್ ಸುಧೀರ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)