varthabharthi


ಬೆಂಗಳೂರು

ಬೆಂಗಳೂರು: ಜ.24ರಿಂದ ಅವರೇಕಾಯಿ ಮೇಳ

ವಾರ್ತಾ ಭಾರತಿ : 21 Jan, 2022

ಬೆಂಗಳೂರು, ಜ.21: ನಗರದ ಸಜ್ಜನ್‍ರಾವ್ ಸರ್ಕಲ್‍ನಲ್ಲಿ ಜ.24ರಿಂದ ಜ.31ರವರೆಗೆ ಅವರೇಕಾಯಿ ಮೇಳವನ್ನು ಪ್ರತಿ ವರ್ಷದಂತೆ ಈ ವರ್ಷವು ಆಯೋಜಿಸಲಾಗಿದೆ.

ಈ ವರ್ಷ ಸುಮಾರು ಒಂಭತ್ತು ಟನ್‍ಗಿಂತ ಅಧಿಕ ಅವರೇಕಾಯಿ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಶ್ರೀ ವಾಸವಿ ಕಾಂಡಿಮೆಂಟ್ಸ್‍ನ ಮಾಲಕ ಶಶಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

ಮಧ್ಯವರ್ತಿಗಳಿಗೆ ಅವಕಾಶವಿಲ್ಲದ ಕಾರಣ, ಗ್ರಾಹಕರು ಕಡಿಮೆ ಬೆಲೆಗೆ ಅವರೇಕಾಯಿಯನ್ನು ಖರೀದಿಸಬಹುದು. ಅಲ್ಲದೆ, ಅವರೇಕಾಯಿಯಿಂದ ತಯಾರಿಸಲಾದ ಇಡ್ಲಿ, ದೋಸೆ, ಪಾಯಸ, ಚಕ್ಕಲಿ, ನಿಪ್ಪಟ್ಟು ಸೇರಿದಂತೆ ನೂರಾರು ಬಗೆಯ ತಿಂಡಿ-ತಿನಿಸುಗಳನ್ನು ಖರೀದಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)