varthabharthi


ದಕ್ಷಿಣ ಕನ್ನಡ

ಮಂಗಳೂರು; ಪೊಲೀಸರಿಗೆ ಹಲ್ಲೆ ಆರೋಪ: ಇಬ್ಬರ ಬಂಧನ

ವಾರ್ತಾ ಭಾರತಿ : 21 Jan, 2022

ಬಂಧಿತ ಆರೋಪಿಗಳು

ಮಂಗಳೂರು, ಜ.21: ನಗರದ ಎಯ್ಯಡಿಯಲ್ಲಿ ಕರ್ತವ್ಯ ಮುಗಿಸಿ ವಾಮಂಜೂರಿನಲ್ಲಿರುವ ವಸತಿಗೃಹಕ್ಕೆ ತೆರಳುತ್ತಿದ್ದ ಕದ್ರಿ ಠಾಣೆಯ ಇಬ್ಬರು ಪೊಲೀಸರಿಗೆ ಹಲ್ಲೆಗೈದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಡ್ಯಾನಿ ಪೌಲ್ (39) ಹಾಗು ಮ್ಯಾಕ್ಸಿಂ ಜೋಸೆಫ್ ನೊರೊನ್ಹಾ (54) ಬಂಧಿತ ಆರೋಪಿಗಳು.

ಕದ್ರಿ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಶಿವಾನಂದ ಡಿ.ಟಿ. ಹಾಗು ಬೀರೇಂದ್ರ ಎಂಬವರು ಜ.18ರಂದು ರಾತ್ರಿ ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಆರೋಪಿಗಳಿಬ್ಬರು ಯೆಯ್ಯಾಡಿ ಜಂಕ್ಷನ್‌ನಲ್ಲಿ ತಡೆದು ನಿಲ್ಲಿಸಿದ್ದಾರೆ. ಅಲ್ಲದೆ ಬೈಕ್‌ನ ಕೀ ಎಳೆದುಕೊಂಡು ಸಮವಸ್ತ್ರ ಎಳೆದು ಅವಾಚ್ಯ ಶಬ್ದಗಳಿಂದ ಬೈದು, ‘ನೀವು ನಕಲಿ ಪೊಲೀಸರು ಹಾಗು ನೀವು ರೋಲ್‌ಕಾಲ್ ಮಾಡುತ್ತಿದ್ದೀರಿ’ ಎಂದು ಬೈದಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳಿಬ್ಬರು ಹಲ್ಲೆ ನಡೆಸಿ, ಇಲಾಖೆಗೆ ಅಗೌರವ ತರುವ ರೀತಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಸ್ಲೋ ಚಾಟನ್ನು ಕಿತ್ತು ಬಿಸಾಡಿದ್ದಾರೆ ಎಂದು ಶಿವಾನಂದ ಡಿ.ಟಿ. ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಪೊಲೀಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)