varthabharthi


ಕರ್ನಾಟಕ

ಜನರ ಆರ್ಥಿಕ ಬದುಕನ್ನು ರಕ್ಷಿಸಲು ವಾರಾಂತ್ಯ ಕರ್ಫ್ಯೂ ರದ್ದು: ಗೃಹ ಸಚಿವ ಆರಗ ಜ್ಞಾನೇಂದ್ರ

ವಾರ್ತಾ ಭಾರತಿ : 21 Jan, 2022

ಚಿಕ್ಕಬಳ್ಳಾಪುರ, ಜ.21:ವೀಕ್ ಎಂಡ್ ಕರ್ಫ್ಯೂ ಅನ್ನು ರದ್ದು ಪಡಿಸಿರುವ ರಾಜ್ಯ ಸರಕಾರ, ಜನರ ಆರ್ಥಿಕ ಬದುಕನ್ನು ಕಾಪಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

''ತಮ್ಮ ಇಲಾಖೆಯ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, " ಜನರ ಬದುಕು ಹಾಗೂ ಜೀವ ಎರಡನ್ನೂ ರಕ್ಷಿಸುವ ಜವಾಬ್ದಾರಿ ಸರಕಾರ ಹೊಂದಿದೆ" ಎಂದರು.

ಕೋವಿಡ್ ವೈರಾಣು ಸಾಂಕ್ರಮಿಕ ವಾಗಿದ್ದು, ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಹರಡುತ್ತಿದೆ, ಆದರೆ ಇದರಿಂದ ಆಸ್ಪತ್ರೆಗಳಿಗೆ ಸೇ್ಪಡೆಯಾಗುವವರ ಸಂಖ್ಯೆ ಕಡಿಮೆ ಇರುವುದರಿಂದ ವೀಕ್ ಎಂಡ್ ಕರ್ಫ್ಯೂ ರದ್ದಾಗಿದೆ ಎಂದ ಸಚಿವರು "ಒಂದು ವೇಳೆ ಆಸ್ಪತ್ರೆಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾದರೆ, ಲಾಕ್ ಡೌನ್ ವಾಪಸು ಅನಿವಾರ್ಯ ವಾಗಬಹುದು" ಎಂದು ಎಚ್ಚರಿಸಿದರು.

ಸರಕಾರದ ಈ ನಿರ್ಧಾರ ತಜ್ಞರ ಶಿಫಾರಸಿಗೆ ಅನುಗುಣವಾಗಿದೆ ಎಂದ ಸಚಿವರು, " ಪೊಲೀಸರು ನೈಟ್ ಕರ್ಫ್ಯೂ ಹೇರಿಕೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಾರೆ" ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, " ವೀಕ್ ಎಂಡ್ ಕರ್ಫ್ಯೂ ರದ್ದು ಪಡಿಸುವ ನಿರ್ಧಾರ ಒಕ್ಕೊರಲಿನದಾಗಿತ್ತು" ಎಂದು ಸ್ಪಷ್ಟ ಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)