varthabharthi


ಅಂತಾರಾಷ್ಟ್ರೀಯ

ಹಿಮದಿಂದ ಹೆಪ್ಪುಗಟ್ಟಿ ಮಗು ಸಹಿತ 4 ಮಂದಿ ಮೃತ್ಯು

ವಾರ್ತಾ ಭಾರತಿ : 21 Jan, 2022

ಸಾಂದರ್ಭಿಕ ಚಿತ್ರ:PTI

ಮಾಂಟ್ರಿಯಲ್, ಜ.21: ಅಮೆರಿಕದ ಗಡಿಭಾಗದ ಬಳಿ ತೀವ್ರ ಹಿಮದಿಂದ ಹೆಪ್ಪುಗಟ್ಟಿ ಮೃತಪಟ್ಟ ಮಗು ಸಹಿತ 4 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಕೆನಡಾದ ಅಧಿಕಾರಿಗಳು ಹೇಳಿದ್ದಾರೆ.

ನಿರಾಶ್ರಿತರು ಸಂಚರಿಸುವ ಪ್ರದೇಶ ಇದಾಗಿದೆ. ಇಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಹಿಮಪಾತವಾಗುತ್ತಿದ್ದು ಇಲ್ಲಿನ ತಾಪಮಾನ ಬುಧವಾರ ಮೈನ್ಸ್ 35 ಡಿಗ್ರಿ ಸೆಲ್ಶಿಯಸ್‌ನಷ್ಟಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಇವರೆಲ್ಲಾ ಹಿಮಪಾತಕ್ಕೆ ಸಿಲುಕಿ ಥಂಡಿಯಿಂದ ಹೆಪ್ಪುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ರಾಯಲ್ ಕೆನಡಿಯನ್ ಪೊಲೀಸ್ ಇಲಾಖೆಯ ಹೇಳಿಕೆ ತಿಳಿಸಿದೆ. ಅಮೆರಿಕದ ಗಡಿಗಿಂತ ಸುಮಾರು 12 ಮೀಟರ್ ಒಳಭಾಗದಲ್ಲಿ, ಕೇಂದ್ರ ಮನಿಟೋಬ ಪ್ರಾಂತದ ಎಮರ್ಸನ್ ನಗರಕ್ಕಿಂತ ಸುಮಾರು 10 ಕಿಮೀ ದೂರದಲ್ಲಿ ಒಂದು ಮಗು, ಇಬ್ಬರು ವಯಸ್ಕರ ಮೃತದೇಹ ಪತ್ತೆಯಾಗಿದೆ. ತುಸು ದೂರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)