ರಾಷ್ಟ್ರೀಯ
ಪಂಜಾಬ್: 2 ಕಿ.ಗ್ರಾಂ. ಆರ್ಡಿಎಕ್ಸ್ ಪತ್ತೆ
ವಾರ್ತಾ ಭಾರತಿ : 22 Jan, 2022
ದಿನಾನಗರ್ (ಪಂಜಾಬ್), ಜ. 21: ಗಣರಾಜ್ಯೋತ್ಸವ ಆಚರಣೆಯ ಕೆಲವು ದಿನ ಮುನ್ನ ದಿನಾನಗರದಲ್ಲಿ ಸುಮಾರು 2 ಕಿ. ಗ್ರಾಂ. ಆರ್ಡಿಎಕ್ಸ್ ಸ್ಫೋಟಕವನ್ನು ಗುರುದಾಸಪುರ ಪೊಲೀಸರು ಪತ್ತೆ ಮಾಡಿದ್ದಾರೆ ‘‘ದಿನಾ ನಗರದಿಂದ ಸುಮಾರು 2 ಕಿ.ಗ್ರಾಂ. ಆರ್ಡಿಎಕ್ಸ್ ಅನ್ನು ಗುರುದಾಸಪುರ ಪೊಲೀಸರು ಪತ್ತೆ ಮಾಡಿದ್ದಾರೆ. ಚಂಡಿಗಢದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಪತ್ರಿಕಾಗೋಷ್ಠಿ ನಿಗದಿಯಾದ ಕೆಲವು ನಿಮಿಷಗಳ ಮುನ್ನ ಈ ಸ್ಫೋಟಕ ಪತ್ತೆಯಾಗಿದೆ’’ ಎಂದು ಸ್ಥಳದಲ್ಲಿ ಇದ್ದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)