varthabharthi


ವೈವಿಧ್ಯ

ಪ್ಲಾಟ್‌ಫಾರ್ಮ್ ಹಾಗೂ ರೈಲುಗಳ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಿ

ವಾರ್ತಾ ಭಾರತಿ : 1 Feb, 2022
ಒಲಿವರ್ ಡಿ’ಸೋಜ, ಕಾರ್ಯಕಾರಿ ಕಾರ್ಯದರ್ಶಿ, ರೈಲ್ವೆ ಯಾತ್ರಿ ಸಂಘ ಮುಂಬೈ

ರೈಲು ಪ್ರಯಾಣಿಕರ ಪಯಣವನ್ನು ಸುಗಮವಾಗಿಸಲು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ರೈಲು ಅಧಿಕಾರಿಗಳಿಗೆ ಪ್ರಜ್ಞಾವಂತ ನಾಗರಿಕರೇ ಅರಿವು ಮೂಡಿಸುವ ಕೆಲಸವನ್ನು ಇತ್ತೀಚಿನ ದಿನಗಳಲ್ಲಿ ಮಾಡಬೇಕಾಗಿದೆ.

ರೈಲಿನ ಪ್ಲಾಟ್‌ಫಾರ್ಮ್‌ಗಳು ತೀರಾ ತಗ್ಗಿನಲ್ಲಿದ್ದು; ಪ್ಯಾಸೆಂಜರ್/ಲೋಕಲ್ ರೈಲುಗಳನ್ನ್ನು ಹತ್ತಲು ಜನರು ಪರದಾಡುವುದನ್ನು ಕಂಡರೂ ರೈಲು ಅಧಿಕಾರಿಗಳು ಈ ಬಗ್ಗೆ ಯಾವುದೇ ಧನಾತ್ಮಕ ನಿಲುವನ್ನು ತೆಗೆದುಕೊಂಡದ್ದು ಕಂಡುಬರುವುದಿಲ್ಲ ಈ ಬಗ್ಗೆ ಮುಂಬೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಿ ನ್ಯಾಯ ಪಡೆಯಬೇಕಾದುದು ಪ್ರಯಾಣಿಕರ ದುರ್ದೈವ.

ಮಂಗಳೂರು ಸೆಂಟ್ರಲ್‌ನಿಂದ ಕೊಂಕಣದ ರೋಹಾ ತನಕದ ಎಲ್ಲಾ ರೈಲು ಪ್ಲಾಟ್‌ಫಾರ್ಮ್ ಹಾಗೂ ರೈಲುಗಳ ಮಧ್ಯೆ ಇರುವ ಅಂತರ ತೀರಾ ಹೆಚ್ಚಾಗಿದ್ದು ಇವುಗಳ ಮಧ್ಯೆ ಬೀಳುವ ಘಟನೆಗಳು ಹೆಚ್ಚಾಗುತ್ತಿದೆ. ರೈಲಿನ ಬಾಗಿಲಿನ ಹೊರಗಡೆ ಇರುವ ಎರಡು ಕಬ್ಬಿಣದ ರಾಡ್‌ಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಎಕ್ಸ್ ಪ್ರೆಸ್ ರೈಲಿಗಿರುವ ಕೇವಲ 2 ನಿಮಿಷ ನಿಲುಗಡೆ ಯೊಳಗೆ ಕಬ್ಬಿಣದ ಏಣಿಯ 3ಮೆಟ್ಟಲುಗಳನ್ನು ಲಗೇಜ್ ಸಮೇತ ಹತ್ತುವುದೆಂದರೆ ಎವರೆಸ್ಟ್ ಶಿಖರ ಹತ್ತಿದಂತೆ.

ವರ್ಷಗಳ ಹಿಂದೆ ಅಂದಿನ ಮುಂಬೈ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ ಮತ್ತು ನ್ಯಾಯಾಧೀಶ ಎಂ.ಎಸ್. ಸಂಕ್ಲೇಚಾ ಅವರು ಸ್ವಯಂ ದಾವೆ ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ಕೋರ್ಟ್ ತೀರ್ಪಿನಲ್ಲಿ ಫ್ಲಾಟ್‌ಫಾರ್ಮ್ ಎತ್ತರವು 900ಮಿ.ಮೀ.ನಿಂದ 970ಮಿ.ಮೀ. ಇರಬೇಕು ಎಂದಿತ್ತು. ರೈಲು ಅಧಿಕಾರಿಗಳು ತಮ್ಮ ಪೂರ್ವಭಾವಿ ನಿಲುವನ್ನು ಬದಿಗಿಟ್ಟು, ಎಲ್ಲ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡು ರೈಲು ಹಾಗೂ ಪ್ಲಾಟ್‌ಫಾರ್ಮ್ ಅಂತರವನ್ನು ಸುರಕ್ಷಿತವಾಗಿ ರಿಸಬೇಕು ಎಂದು ಆದೇಶಿಸಿತ್ತು.

ಇದೀಗ ಮುಂಬೈನಿಂದ ಹೊರಡುವ ಎಲ್ಲಾ ಲೋಕಲ್ ರೈಲುಗಳನ್ನು ಪ್ಲಾಟ್ ಫಾರ್ಮ್ ನಲ್ಲಿ ನಿಂತ ಪ್ರಯಾಣಿಕರು ಕೇವಲ ಒಂದು ಕಾಲನ್ನು ರೈಲಿನೊಳಗೆ ಇಟ್ಟು ಹತ್ತಬಹುದಾಗಿದೆ. ಆದರೆ ಸಲೀಸಾಗಿ ರೈಲನ್ನು ಹತ್ತುವ ರೈಲು ವ್ಯವಸ್ಥೆ ಕೊಂಕಣ ರೈಲ್ವೆಯ ಯಾವುದೇ ರೈಲು ನಿಲ್ದಾಣದಲ್ಲಿಲ್ಲ. ಒಂದು ಹೈಕೋರ್ಟ್ ನೀಡಿದ ತೀರ್ಪು ಇಡೀ ಭಾರತದ ಎಲ್ಲಾ ರೈಲು ಎಲ್ಲ ನಿಲ್ದಾಣಗಳಿಗೆ ಅನ್ವಯಿಸುತ್ತದೆ ಹೊರತು ಕೇವಲ ಮುಂಬೈಯೊಳಗಿನ ಫ್ಲಾಟ್‌ಫಾರ್ಮ್ ಗಳಿಗಲ್ಲ ರೈಲ್ವೆ ಇಲಾಖೆಯು ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತಾಗಲಿ ಎಂಬುದು ಎಲ್ಲಾ ಪ್ರಯಾಣಿಕರ ಆಶಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)