ರೈಲ್ವೆ ಹಳಿಯ ಉನ್ನತೀಕರಣ; ರೈಲು ಸಂಚಾರದಲ್ಲಿ ವ್ಯತ್ಯಯ
ಸಾಂದರ್ಭಿಕ ಚಿತ್ರ
ಉಡುಪಿ, ಫೆ.2: ಕೇಂದ್ರ ರೈಲ್ವೆಯು ಮುಂಬೈ ವಿಭಾಗದ ಥಾಣೆ ಮತ್ತು ದಿವಾ ಜಂಕ್ಷನ್ ನಡುವಿನ 5 ಮತ್ತು 6ನೇ ಹಳಿಯ ಉನ್ನತೀಕರಣ ಕಾಮಗಾರಿ ಯನ್ನು ಫೆ.5ರಿಂದ 7ರವರೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಇದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ರೈಲು ನಂ.12133 ಮುಂಬೈ ಸಿಎಸ್ಎಂಟಿ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಫೆ.4ರಿಂದ 7ನೇ ದಿನಾಂಕದವರೆಗಿನ ಎಲ್ಲಾ ಸಂಚಾರವನ್ನು ರದ್ದುಪಡಿಸಲಾಗಿದೆ. ಅದೇ ರೀತಿ ರೈಲು ನಂ.12134 ಮಂಗಳೂರು ಜಂಕ್ಷನ್- ಮುಂಬೈ ಸಿಎಸ್ಎಂಟಿ ಎಕ್ಸ್ಪ್ರೆಸ್ ರೈಲಿನ ಫೆ.4ರಿಂದ 7ರವರೆಗಿನ ಎಲ್ಲಾ ನಾಲ್ಕು ದಿನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಅದೇ ರೀತಿ ಲೋಕಮಾನ್ಯ ತಿಲಕ್-ಕೊಚ್ಚುವೇಲಿ ಎಕ್ಸ್ಪ್ರೆಸ್ ರೈಲಿನ ಫೆ.5ರ ಹಾಗೂ ಕೊಚ್ಚುವೇಲಿ- ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲಿನ ಫೆ.7ರ ಪ್ರಯಾಣವನ್ನು ರದ್ದುಪಡಿಸಲಾಗಿದೆ. ಎರ್ನಾಕುಲಂ ಜಂಕ್ಷನ್- ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲಿನ ಫೆ.2 ಮತ್ತು ಫೆ.6ರ ಸಂಚಾರವನ್ನು ರದ್ದುಪಡಿಸ ಲಾಗಿದ್ದು, ಲೋಕಮಾನ್ಯ ತಿಲಕ್- ಎರ್ನಾಕುಲಂ ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಫೆ.5 ಮತ್ತು ಫೆ.8ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.
ರೈಲು ನಂ.12620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲಿನ ಫೆ.4, 5, 6ರ ಪ್ರಯಾಣ ಪನ್ವೇಲ್ನಲ್ಲಿ ಕೊನೆಗೊಳ್ಳಲಿದೆ. ಅದೇ ರೀತಿ ರೈಲು ನಂ. 12619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನ ಫೆ.5, 6, 7ರ ಪ್ರಯಾಣ ಪನ್ವೇಲ್ನಿಂದ ಪ್ರಾರಂಭ ಗೊಳ್ಳಲಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್. ಕೆ.ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.