ಮಜೂರು ಬದ್ರಿಯ ಮಸೀದಿ ಪದಾಧಿಕಾರಿಗಳ ಆಯ್ಕೆ
ಕಾಪು, ಫೆ.3: ಮಲ್ಲಾರು ಮಜೂರು ಬದ್ರಿಯ ಜುಮಾ ಮಸೀದಿಯ ಮಹಾಸಭೆಯು ಶಅಬಾನ್ ಕೊಪ್ಪಲತೊಟ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಮಹಾಸಭೆಯನ್ನು ಖತೀಬ್ ಅಲ್ಹಾಜ್ ಎಂ.ಕೆ. ಅಬ್ದುರ್ರಶೀದ್ ಅಲ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ನಿರ್ಗಮನ ಅಧ್ಯಕ್ಷ ಇಬ್ರಾಹಿಮ್ ಐಡಿಯಲ್ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಗೌರವ ಪುರಸ್ಕ್ರತ ಪಿ.ಪಿ.ಬಶೀರ್ ಉಸ್ತಾದ್ ಅವರನ್ನು ಸನ್ಮಾನಿಸಲಾಯಿತು.
ಮುಂದಿನ ಸಾಲಿನ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಅಬಾನ್ ಕರಂದಾಡಿ, ಉಪಾಧ್ಯಕ್ಷರಾಗಿ ಅಬ್ದುಲ್ಲಾ ಪೊಲಿಪು, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ಮಜೂರು, ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ಮಲ್ಲಾರು, ಕಾರ್ಯದರ್ಶಿಯಾಗಿ ಎಂ.ಕೆ. ಇಬ್ರಾಹಿಂ ಕರಂದಾಡಿ, ಕೊಶಾಧಿಕಾರಿಯಾಗಿ ಫೈಝಲ್ ಮೊಯ್ಯಾಟ್ಟು, ಕಾರ್ಯ ಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುರ್ರಝಾಕ್ ಕೊಪ್ಪಲತೊಟ, ಶರ್ಫುದ್ದೀನ್ ಕೊಂಬಗುಡ್ಡೆ, ಅಬ್ದುಲ್ಲ ಚಂದ್ರನಗರ, ಹಸನಬ್ಬ ಮಜೂರು, ಸುಲೈಮಾನ್ ಗುಡ್ಡೇಕೇರಿ, ಮುಹಮ್ಮದ್ ಫಾರೂಕ್ ಚಂದ್ರನಗರ, ಹಾಜಿಮೊನು ಕರಂದಾಡಿ, ರಫೀಕ್ ಪಕೀರ್ಣಕಟ್ಟೆ, ಶಅಬಾನ್ ಕಡಸಲೆಬೆಟ್ಟು, ಅಶ್ರಫ್ ಅಚ್ಚಾಲ್, ಶರ್ಫುದ್ದೀನ್ ಶೇಖ್ ಕರಂದಾಡಿ ಇವರನ್ನು ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಶಂಸುದ್ದೀನ್ ಕೊಪ್ಪಲತೊಟ ಗತ ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಕೆ.ಪಿ. ಮಲ್ಲಾರು ಮುಂದಿನ ಯೊಜನಾ ನಕ್ಷೆ ಮಹಾಸಭೆಗೆ ಮಂಡಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ವಂದಿಸಿದರು. ಪಿ.ಪಿ.ಬಶೀರ್ ಉಸ್ತಾದ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.