ಉಡುಪಿ: ಹೂಡೆ ಕಾಲೇಜಿನಲ್ಲಿ ಅಪರೂಪದ ಇಲಿ ಪತ್ತೆ
ಉಡುಪಿ, ಫೆ.9: ತೋನ್ಸೆ ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ಅಪರೂಪದ ಇಲಿಯೊಂದು ಮಂಗಳವಾರ ಪತ್ತೆಯಾಗಿದೆ.
ಕಾಲೇಜಿನ ಹಾಲ್ನಲ್ಲಿ ಓಡಾಡುತ್ತಿದ್ದ ಹಳದಿ ಹಾಗೂ ಬಿಳಿ ಬಣ್ಣದಿಂದ ಕೂಡಿದ ಉದ್ದ ಕೂದಲು ಹೊಂದಿರುವ ಮೂಷಿಕನನ್ನು ಕಂಡು ಶಿಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೀಗ ಈ ಅಪರೂಪದ ಇಲಿಯು ಎಲ್ಲರ ಆಕರ್ಷರ್ಣೀಯ ಕೇಂದ್ರ ಬಿಂದುವಾಗಿದೆ. ಸದ್ಯ ಈ ಇಲಿಯನ್ನು ಕಾಲೇಜಿನಲ್ಲಿ ಬಾಕ್ಸ್ ಹಾಕಿ ಇಡಲಾಗಿದೆಂದು ಕಾಲೇಜಿನ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ತಿಳಿಸಿದ್ದಾರೆ.
ಇದೊಂದು ಸಾಕು ತಳಿ (ಡೊಮೆಸ್ಟಿಕೇಟೆಡ್)ಯಾಗಿದ್ದು, ವನ್ಯಜೀವಿಯಲ್ಲ. ಬೆಂಗಳೂರಿನಂತಹ ಮಹಾನಗರದ ಪೆಟ್ಶಾಪ್ಸ್ಗಳಲ್ಲಿ ಪಕ್ಷಿ, ಬೆಕ್ಕು, ಗಿನ್ನಿ ಪಿಗ್ಸ್ ಮತ್ತು ಈ ರೀತಿಯ ತಳಿಗಳನ್ನು ಸಾಕಾಣಿಕೆ ದೃಷ್ಟಿಯಿಂದ ಮಾರಾಟ ಮಾಡಲಾಗುತ್ತದೆ. ಅದೇ ರೀತಿ ತಳಿ ಇದಾಗಿರಬಹುದು ಎಂದು ಪ್ರಾಣಿ ಶಾಸ್ತ್ರಜ್ಞರು ತಿಳಿಸಿದ್ದಾರೆ.
Next Story