ವೈವಿಧ್ಯ
ಕೊಂಕಣ ರೈಲ್ವೆ ಪ್ರಯಾಣಿಕರೇಕೆ ಹೆಚ್ಚು ಹಣ ಪಾವತಿಸಬೇಕು?

ಕೊಂಕಣ ರೈಲ್ವೆ ಮಾರ್ಚ್ 1997ರಲ್ಲಿ ರೈಲುಗಳನ್ನು ಓಡಿಸಲು ಆರಂಭಿಸಿತು. ಈ ಮೊದಲು ಅಂದಿನ ರೈಲು ಮಂತ್ರಿ ರಾಮ್ ವಿಲಾಸ್ ಪಾಸ್ವಾನ್ ಅವರು ಕೊಂಕಣ ರೈಲ್ವೆಗೆ ಸಂಬಂಧಿಸಿದ ಹೊಸ ನಿಯಮವನ್ನು ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಮಂಡಿಸಿದರು - ಅದರ ಪ್ರಕಾರ ಕೊಂಕಣ ಹಳಿಗಳನ್ನು (715ಕಿಮೀ) ಹಾಕಲು ಖರ್ಚು ಮಾಡಿದ ಹಣವನ್ನು ವಾಪಸ್ ಪಡೆಯಲು ತೋಕೂರ್ನಿಂದ ರೋಹಾ ತನಕದ ಹಾದಿಗೆ ಶೇ. 140 ಟಿಕೆಟ್ ಶುಲ್ಕ ವಿಧಿಸುವುದು ಹಾಗೂ ಕೊಂಕಣ ರೈಲ್ವೇ ತನ್ನ ಲಾಭವನ್ನು ಆರಂಭಿಸಿದ ನಂತರ ಅದನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಿ ದರವನ್ನು ಶೇ. 100 ಮಾಡುವುದಾಗಿತ್ತು.
ನಿಮಗೆಲ್ಲರಿಗೂ ತಿಳಿದಿರುವಂತೆ ಮತ್ಸ್ಯಗಂಧ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ನಲ್ಲಿ 2014ರವರೆಗೆ ಮಂಗಳೂರು ಸೆಂಟ್ರಲ್ನಿಂದ ಲೋಕಮಾನ್ಯ ತಿಲಕ್ ಟರ್ಮಿನಸ್ ತನಕ ಸ್ಲೀಪರ್ ಕ್ಲಾಸ್ಗೆ ರೂ. 382 ದರವಿತ್ತು. ಹಿರಿಯ ನಾಗರಿಕರಿಗೆ (58 ವರ್ಷಕ್ಕಿಂತ ಹೆಚ್ಚಿನ ಮಹಿಳೆಯರು ಮತ್ತು 60ಕ್ಕಿಂತ ಹೆಚ್ಚಿನ ಪುರುಷರು) ದರ ಶೇ. 77 ಅಂದರೆ ರೂ 295. ಅದೇ ದರ 5 ರಿಂದ 12 ವರ್ಷದೊಳಗಿನ ಮಕ್ಕಳಿಗೂ ಅನ್ವಯಿಸುತ್ತದೆ. ಈ ದರಗಳನ್ನು 140 ಮತ್ತು ಹೆಚ್ಚುವರಿ ಸೂಪರ್ ಫಾಸ್ಟ್ ರೈಲು ದರ - ಎಂದು ಲೆಕ್ಕಹಾಕಲಾಗಿದೆ
ಕೊಂಕಣ ರೈಲ್ವೆ ತನ್ನ ಲಾಭವನ್ನು 2001-02ರ ಆರ್ಥಿಕ ವರ್ಷದಲ್ಲಿ ಆರಂಭಿಸಿತು. ಆದರೆ ಇಂದಿಗೂ ಭಾರತೀಯ ರೈಲ್ವೆಯೊಂದಿಗೆ ಅದು ವಿಲೀನಗೊಂಡಿಲ್ಲ ಮತ್ತು ನಮ್ಮ ತಪ್ಪಿಲ್ಲದೆ ನಾವು ೇ. 140ರಷ್ಟು ಪಾವತಿಸುತ್ತಿದ್ದೇವೆ.
2014ರಲ್ಲಿ ಕೇಂದ್ರ ಸರಕಾರ ಬದಲಾದ ನಂತರ ಈ ದರವನ್ನು ರೂ. 540ಕ್ಕೆ ಏರಿಸಲಾಯಿತು. ಅವರು ಹಿರಿಯ ನಾಗರಿಕರ ರಿಯಾಯಿತಿಗಳನ್ನು ತೆಗೆದುಹಾಕಿದರು. ರಿಯಾಯಿತಿ ಟಿಕೆಟ್ ಅಗತ್ಯವಿರುವ ಮಕ್ಕಳನ್ನು ಅವರು ಪ್ರಯಾಣಿಸುವ ವಯಸ್ಕರ ಮಡಿಲಲ್ಲಿ ಕುಳಿತುಕೊಳ್ಳಲು ಹಾಗೂ ನಿದ್ರಿಸಲು ಹೇಳಲಾಯಿತು. ವಾಸ್ತವವಾಗಿ ಈಗ ಮಂಗಳೂರು ಸೆಂಟ್ರಲ್ನಿಂದ ಎಲ್ಟಿಟಿಗೆ ಸೂಪರ್ ಫಾಸ್ಟ್ ರೈಲಿನ ದರ ಸ್ಲೀಪರ್ ಕ್ಲಾಸ್ಗೆ ರೂ. 272, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಇದು ರೂ. 210 ಮಾತ್ರ ಆಗಬೇಕಿತ್ತು. ಕೊಂಕಣ ರೈಲ್ವೇ ಪ್ರಯಾಣಿಕರನ್ನು ಹೊರತುಪಡಿಸಿ ಎಲ್ಲಾ ಭಾರತೀಯ ರೈಲ್ವೆ ಪ್ರಯಾಣಿಕರು ಶೇ. 100 ದರವನ್ನೇ ಪಾವತಿಸುತ್ತಾರೆ. ಟ್ರ್ಯಾಕ್ ಹಾಕಲು ನಾವು ಅವರಿಗೆ ನಮ್ಮ ಆಸ್ತಿಯನ್ನು ನೀಡಿದ್ದೇವೆ ಮತ್ತು ಇಂದು ನಾವು ನರಳುತ್ತಿದ್ದೇವೆ.
ದಯವಿಟ್ಟು ಇನ್ನಾದರೂ ಕೊಂಕಣ ರೈಲ್ವೆ ತನ್ನ ಪ್ರಯಾಣಿಕರಿಗೆ ಟಿಕೆಟ್ ದರ ಶೇ. 140ರ ಬದಲಿಗೆ; ಭಾರತೀಯ ರೈಲ್ವೆಯ ದರವಾದ ಶೇ. 100 ಮಾತ್ರ ತೆಗೆದುಕೊಳ್ಳಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ