ವಾರಸುದಾರರಿಗೆ ಸೂಚನೆ
ಉಡುಪಿ, ಫೆ.20: ಕಾರ್ಕಳ ಸರಕಾರಿ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ, ಮನೆಯವರು ಯಾರು ಕರೆದುಕೊಂಡು ಹೋಗದೇ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳಾದ ಪೂರ್ಣಿಮಾ ಮತ್ತು ರೋಶನ್ ಮಣಿಪಾಲದ ಸರಳಬೆಟ್ಟಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ವೃದ್ಧರು ತನ್ನ ಹೆಸರು ಡೀಕಯ್ಯ, ತಾನು ಮೂಲತಃ ಕಾರ್ಕಳ ತಾಲೂಕಿನ ಶಿರ್ಲಾಲು ಪರಿಸರದವರು ಎಂದು ತಿಳಿಸಿದ್ದು, ತುಳು ಭಾಷೆ ಮಾತನಾಡುತ್ತಾರೆ. ವೃದ್ಧರ ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ದೂ.ಸಂಖ್ಯೆ: 0820-2526394 ಅನ್ನು ಸಂಪರ್ಕಿಸುವಂತೆ ಕೇಂದ್ರದ ಪ್ರಕಟಣೆ ತಿಳಿಸಿದೆ.
Next Story