ಮಣಿಪಾಲ: ಪಲ್ಸ್ ಪೋಲಿಯೋ ಜಾಗೃತಿ ಕಲಾಕೃತಿ ಅನಾವರಣ
2000 ಹಳೆ ಲಸಿಕೆಗಳ ಬಾಟಲಿಯಿಂದ ವಿಶಿಷ್ಟ ಕೃತಿ ರಚಿಸಿದ ಶ್ರೀನಾಥ್
ಉಡುಪಿ, ಫೆ.26: ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನಾಚರಣೆಯ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ ಮಣಿಪಾಲ ಇದರ ಸಹಯೋಗದೊಂದಿಗೆ ವಿಭಾಗದ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ಕಲಾಕೃತಿಯನ್ನು ಶನಿವಾರ ಅನಾವರಣಗೊಳಿಸಲಾಯಿತು.
ಸುಮಾರು 2,000ದಷ್ಟು ಹಳೆಯ ಲಸಿಕೆಗಳ ಬಾಟಲಿಗಳನ್ನು ಬಳಸಿ ‘ಎರಡು ಹನಿ ಲಸಿಕೆ-ಮಗುವಿನ ಆರೋಗ್ಯಕ್ಕೆ ಬುನಾದಿ’ ಎಂಬ ಘೋಷಣೆಯಡಿ ಮಗುವಿಗೆ ಪೋಲಿಯೋ ಲಸಿಕೆ ನೀಡುವ ಬಗ್ಗೆ ಅವರು ಜಾಗೃತಿ ಕಲಾಕೃತಿಯನ್ನು ರಚಿಸಿದ್ದರು.
ಈ ಕಲಾಕೃತಿಯನ್ನು ಶನಿವಾರ ಮಣಿಪಾಲದ ಕೆ.ಎಂ.ಸಿ ಗ್ರೀನ್ಸ್ನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹಾಗೂ ಕೆಎಂಸಿ ಮಣಿಪಾಲದ ಡೀನ್ ಡಾ.ಶರತ್ ರಾವ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್, ಸಹ ಪ್ರಾಧ್ಯಾಕ ಡಾ.ಮುರುಳೀಧರ ಕುಲಕರ್ಣಿ, ಡಾ.ರಂಜಿತಾ ಶೆಟ್ಟಿ, ಡಾ.ಸ್ನೇಹಾ ಕಾಮತ್, ಡಾ.ದಿವ್ಯಾ ಪೈ, ಸಹ ಪ್ರಾಧ್ಯಾಪಕಿ ಡಾ. ಈಶ್ವರಿ, ಕಲಾವಿದ ಶ್ರೀನಾಥ್ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು.
Next Story