ಉಡುಪಿ: ಕೋವಿಡ್ ಗೆ ಮಹಿಳೆ ಮೃತ್ಯು; ಐದು ಮಂದಿಗೆ ಪಾಸಿಟಿವ್
ಉಡುಪಿ, ಫೆ.27: ಜಿಲ್ಲೆಯಲ್ಲಿ ರವಿವಾರ ಒಟ್ಟು ಐವರು ಕೋವಿಡ್-19ಕ್ಕೆ ಪಾಸಿಟಿವ್ ಬಂದಿದ್ದಾರೆ. ಮಹಿಳೆ ಯೊಬ್ಬರು ದಿನದಲ್ಲಿ ಮೃತಪಟಿದ್ದಾರೆ. ಇಂದು 13 ಮಂದಿ ಸೋಂಕಿ ನಿಂದ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ ಮತ್ತೆ ಎರಡಂಕಿಗೆ ಇಳಿದು 95 ಆಗಿದೆ.
ಉಡುಪಿಯ 69 ವರ್ಷ ಪ್ರಾಯದ ಮಹಿಳೆಯೊಬ್ಬರು ನಿನ್ನೆ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 545ಕ್ಕೇರಿದೆ. ಉಸಿರಾಟದ ತೊಂದರೆಯೂ ಸೇರಿದಂತೆ ಕೋವಿಡ್ ಸೋಂಕಿನ ಗಂಭೀರ ಗುಣಲಕ್ಷಣದೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾದ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ರವಿವಾರ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಇವರೆಲ್ಲರೂ ಉಡುಪಿ ತಾಲೂಕಿಗೆ ಸೇರಿದವರು. ಇವರೆಲ್ಲರಿಗೂ ಅವರವರ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 16 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಮೂವರು ವೆಂಟಿಲೇಟರ್ ಹಾಗೂ ಮೂವರು ಐಸಿಯುನಲ್ಲಿದ್ದಾರೆ.
ಶನಿವಾರ 13 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18385ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1221 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,389ಕ್ಕೇರಿದೆ.
ಜಿಲ್ಲೆಯಲ್ಲಿ ಇಂದು ಲಸಿಕಾಕರಣವಿಲ್ಲದ ಕಾರಣ ಯಾರೂ ಲಸಿಕೆಯನ್ನು ಪಡೆದಿಲ್ಲ.