ಪೋಲಿಯೊ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಶೇ.96.06 ಸಾಧನೆ
ಉಡುಪಿ, ಫೆ.27: ಜಿಲ್ಲೆಯ 0-5 ವರ್ಷದೊಳಗಿನ 73995 ಮಕ್ಕಳ ಪೈಕಿ 71076 ಮಂದಿಗೆ 662 ಬೂತ್‌ಗಳಲ್ಲಿ ಪೋಲಿಯೊ ಲಸಿಕೆ ಹಾಕುವ ಮೂಲಕ ಶೇ.96.06ರಷ್ಟು ಸಾಧನೆ ಮಾಡಲಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದ 571 ಬೂತ್‌ಗಳಲ್ಲಿ 61105 ಮಕ್ಕಳಲ್ಲಿ 58828(ಶೇ.96.27) ಹಾಗೂ ನಗರ ಪ್ರದೇಶದ 91 ಬೂತ್‌ಗಳಲ್ಲಿ 12890 ಮಕ್ಕಳ ಪೈಕಿ 12248(ಶೇ.95.02) ಮಂದಿಗೆ ಲಸಿಕೆ ಹಾಕಲಾಯಿತು.
ಉಡುಪಿ ತಾಲೂಕಿನಲ್ಲಿ 33922 ಮಕ್ಕಳಲ್ಲಿ 33080(ಶೇ.97.52), ಕುಂದಾಪುರ ತಾಲೂಕಿನಲ್ಲಿ 27152 ಮಕ್ಕಳಲ್ಲಿ 25478(ಶೇ.93.83) ಹಾಗೂ ಕಾರ್ಕಳ ತಾಲೂಕಿನಲ್ಲಿ 12921 ಮಕ್ಕಳ ಪೈಕಿ 12518 (ಶೇ.96.88) ಮಕ್ಕಳು ಲಸಿಕೆ ಪಡೆದುಕೊಂಡರು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
Next Story