ಉಡುಪಿ: ಗುರುವಾರ ಆರು ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಮಾ.3: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗುರುವಾರ ಆರು ಮಂದಿಯಲ್ಲಿ ಹೊಸದಾಗಿ ಕಾಣಿಸಿ ಕೊಂಡಿದೆ. ದಿನದಲ್ಲಿ 10 ಮಂದಿ ಸೋಂಕಿ ನಿಂದ ಚೇತರಿಸಿಕೊಂಡರೆ, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿ ರುವವರ ಸಂಖ್ಯೆ 76ಕ್ಕಿಳಿದಿದೆ.
ಇಂದು ಪಾಸಿಟಿವ್ ಬಂದ ಆರು ಮಂದಿಯಲ್ಲಿ ನಾಲ್ವರು ಪುರುಷರು ಹಾಗೂ ಇಬ್ಬರು ಮಹಿಳೆಯರು. ಇವರಲ್ಲಿ ಉಡುಪಿಯ ನಾಲ್ವರು ಹಾಗೂ ಕುಂದಾಪುರ ತಾಲೂಕಿನ ಇಬ್ಬರಿದ್ದಾರೆ. ದಿನದಲ್ಲಿ ಪಾಸಿಟಿವ್ ಬಂದ ಎಲ್ಲಾ ಆರು ಮಂದಿಗೆ ಅವರವರ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಇಬ್ಬರು ವೆಂಟಿಲೇಟರ್ ಹಾಗೂ ಐವರು ಐಸಿಯುನಲ್ಲಿದ್ದಾರೆ.
ಗುರುವಾರ 10 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18422ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1015 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಜಿಲ್ಲೆಯಲ್ಲಿ 18,407ಕ್ಕೇರಿದೆ. ಇಂದು ಸಹ ಜಿಲ್ಲೆಯಲ್ಲಿ ಕೋವಿಡ್ಗೆ ಯಾರೂ ಬಲಿಯಾಗಿಲ್ಲ.
2817 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 2817 ಮಂದಿ ಕೋವಿಡ್ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 221 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 237 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 64 ಮಂದಿ ಮೊದಲ ಡೋಸ್ ಹಾಗೂ 2516 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷ ದೊಳಗಿನ 33 ಮಂದಿ ಮೊದಲ ಡೋಸ್ ಹಾಗೂ 1808 ಮಂದಿ ಎರಡನೇ ಡೋಸ್ನ್ನು ಇಂದು ಪಡೆದುಕೊಂಡಿದ್ದಾರೆ.