1971ರ ಯುದ್ಧದಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧರ ವಿವರಗಳನ್ನು ಸಲ್ಲಿಸಲು ಸೂಚನೆ
ಉಡುಪಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ 1971ರ ಯುದ್ಧದ ಅವಧಿಯಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧರಿಗೆ ಅಭಿನಂದನೆ ಸಲ್ಲಿಸಲು, ಮಾಜಿ ಯೋಧರ ನಂ. ರ್ಯಾಂಕ್ ಮತ್ತು ಹೆಸರು, ರೆಜಿಮೆಂಟ್/ ಕಾರ್ಪ್ಸ್, ಪೂರ್ವಿ/ ಪಶ್ಚಿಮಿ ಸ್ಟಾರ್ ಪಡೆದ ಸ್ವೀಕೃತಿ, 1971 ರಲ್ಲಿ ಸೇವೆ ಸಲ್ಲಿಸಿದ ವಿವರ ಹಾಗೂ ಪ್ರಸ್ತುತ ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ಮಾರ್ಚ್ 7ರೊಳಗೆ ಇ-ಮೇಲ್ ಮೂಲಕ -dydirdswrmlore@gmail.com- ಅಥವಾ ಜಂಟಿ ನಿರ್ದೇಶಕರ ಕಾರ್ಯಾ ಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರ ಕಚೇರಿಗೆ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Next Story