ಎಸ್.ಎಫ್.ಎ ಸೌದಿ ಅರೇಬಿಯಾ - ವಾರ್ಷಿಕ ಮಹಾ ಸಭೆ ಮತ್ತು ನೂತನ ಸಮಿತಿ ರಚನೆ
ಅಲ್ ಜುಬೈಲ್ : ಸೂರಲ್ಪಾಡಿ ಫ್ರೆಂಡ್ಸ್ ಅಸೋಸಿಯೇಟೆಡ್ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಇಸ್ತಿರಾ ಜಾಸ್ಮಿನ್ ಅಲ್ ಜುಬೈಲ್ ನಲ್ಲಿ ನಡೆಯಿತು. ಅನ್ವರ್ ಸಾದತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಅಲ್ ಖೈರ್ ಶಾಲಾ ಆಡಳಿತ ಮಂಡಳಿ ಸೂರಲ್ಪಾಡಿ, ಇದರ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಫಝಲ್ ಮರವೂರ್ ಅವರ ಕಿರಾಅತ್ ಪಠಣದೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಜುನೈದ್ ಫೈಝ್ ಅವರು ಅತಿಥಿಗಳನ್ನು ಹಾಗೂ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು.
ವಾರ್ಷಿಕ ವರದಿ ವಾಚನವನ್ನು ಜತೆ ಕಾರ್ಯದರ್ಶಿ ಇರ್ಶಾದ್ ಅಬ್ದುಲ್ ರಝಾಕ್ ಹಾಗೂ ಲೆಕ್ಕಪತ್ರ ಮಂಡನೆಯನ್ನು ಕೋಶಾಧಿಕಾರಿ ಪರ್ವೆಜ್ ನೆರವೇರಿಸಿದರು.
ಮುಖ್ಯ ಅತಿಥಿಯಾದ ಆಗಮಿಸಿದ್ದ ಅಬ್ದುಲ್ ಮಜೀದ್ ಸೂರಲ್ಪಾಡಿ ಮಾತನಾಡಿ, ಎಸ್.ಎಫ್.ಎ ಯ ಕಾರ್ಯವೈಖರಿ ಮತ್ತು ಶಿಸ್ತಿನ ಬಗ್ಗೆ ಶ್ಲಾಘಿಸಿದರು. ಎಸ್.ಎಫ್.ಎ ಯ ಮರುಸ್ಥಾಪಕ ಅಧ್ಯಕ್ಷರಾದ ಜಾವೇದ್ ಅಬೂಬಕ್ಕರ್, ಹಿರಿಯ ಸದಸ್ಯರಾದ ಹಸನ್ ಬಾವಾ, ಸೌದ್ ಮುಹಮ್ಮದ್ ಹಾಗೂ ಅಫ್ತಾಬ್ ಆಲಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಲಹೆಗಾರರಾಗಿದ್ದ ಸೌದ್ ಮುಹಮ್ಮದ್ ಮತ್ತು ಅಫ್ತಾಬ್ ಆಲಂರವರ ಮುಂದಾಳತ್ವದಲ್ಲಿ ನೂತನ ಸಮಿತಿಯ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು
ಅಧ್ಯಕ್ಷ - ಅನ್ವರ್ ಸಾದತ್
ಉಪಾಧ್ಯಕ್ಷ - ಹಸನ್ ಅಶ್ಫಾಕ್, ಫಯಾಜ್ ಆಲಂ
ಪ್ರಧಾನ ಕಾರ್ಯದರ್ಶಿ - ಇರ್ಶಾದ್ ಅಬ್ದುಲ್ ರಝಾಕ್
ಸಹಕಾರ್ಯದರ್ಶಿ - ಅನ್ವೀರ್ ಹಸನ್
ಕೋಶಾಧಿಕಾರಿ - ಪರ್ವೇಜ್ ಯಾಕೂಬ್
ಸಹ ಕೋಶಾಧಿಕಾರಿ - ಮುಹಮ್ಮದ್ ಫಯಾಝ್
ಮಾಧ್ಯಮ ಸಂಯೋಜಕರು - ಮುಹಮ್ಮದ್ ತೌಸಿಫ್, ಜುನೈದ್ ಫೈಝ್
ಇವೆಂಟ್ ವ್ಯವಸ್ಥಾಪಕರು - ಮುಹಮ್ಮದ್ ಇಮ್ರಾನ್
ಮಾನವ ಸಂಪನ್ಮೂಲ ಸಂಯೋಜಕರು - ಫಝಲ್ ಮರವೂರು
ಲೆಕ್ಕ ಪರಿಶೋಧಕರು - ಶರೀಫ್ ಮರವೂರು
ಅಲ್ ಖೈರ್ ಟ್ರಸ್ಟೀ - ಮುಹಮ್ಮದ್ ಇಲ್ಯಾಸ್, ಸಮೀರ್ ಅಬ್ಬಾಸ್
ಸಮಿತಿ ಸದಸ್ಯರು - ಖಾದರ್ ಹಾಶಿಮ್, ಅಬ್ದುಲ್ ಅಝೀಜ್ ಬಿ.ಕೆ, ಮುಹಮ್ಮದ್ ಫೈಝಲ್, ಆಶಿಕ್ ಇಕ್ಬಾಲ್, ನೌಶಾದ್ ಬಜಾಲ್, ಮುಹಮ್ಮದ್ ಝಕ್ವಾನ್
ಸಲಹೆಗಾರರು - ಸೌದ್ ಮುಹಮ್ಮದ್, ಅಫ್ತಾಬ್ ಆಲಂ, ಅಬ್ದುಲ್ ರಹ್ಮಾನ್ ಫಕ್ರುದ್ದೀನ್, ಜಾವೇದ್ ಅಬೂಬಕ್ಕರ್, ಹಸನ್ ಬಾವಾ, ಝುಬೈರ್ ಹಾಶಿಮ್.
ಅಧ್ಯಕ್ಷರಾಗಿ ಮರು ಆಯ್ಕೆಯಾದ ಅನ್ವರ್ ಸಾದತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಜುನೈದ್ ಫೈಝ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಫಯಾಜ್ ಆಲಂ ಸಂಘಟಿಸಿದರು.
ಸಭೆಯ ನಂತರ ಸದಸ್ಯರಿಗೆ ಹಾಗೂ ಮಕ್ಕಳಿಗೆ ಕ್ರೀಡಾ ಕಾರ್ಯಕ್ರಮಗಳನ್ನು ಮುಹಮ್ಮದ್ ಇಲ್ಯಾಸ್ ಆಯೋಜಿಸಿದರು.