''ಉಕ್ರೇನ್ನಲ್ಲಿ ನಾವು ಇರುವವರೆಗೂ ಭಾರತೀಯ ರಾಯಭಾರಿ ಕಚೇರಿಯವರು ನಮ್ಮ ನೆರವಿಗೆ ಬರಲಿಲ್ಲ''
ಉಕ್ರೇನ್ ನಲ್ಲಿ ಸಿಲುಕಿದ್ದ ಮೈಸೂರಿನ ವಿದ್ಯಾರ್ಥಿ ರೋಹಿತ್
ವಿದ್ಯಾರ್ಥಿ ರೋಹಿತ್
ಮೈಸೂರು,ಮಾ.5; 'ಉಕ್ರೇನ್ನಲ್ಲಿ ಯುದ್ಧ ಪ್ರಾರಂಭವಾದ ಸಂದರ್ಭದಲ್ಲಿ ಅಲ್ಲಿ ವ್ಯಾಸಾಂಗ ಮಾಡುತ್ತಿದ್ದ ನಾವು ಬಹಳ ಆತಂಕಕ್ಕೀಡಾಗಿದ್ದೆವು. ಆ ಸಂದರ್ಭದಲ್ಲಿ ಭಾರತೀಯ ರಾಯಭಾರಿ ಕಚೇರಿಯವರು ನಮ್ಮ ನೆರವಿಗೆ ಬರಲಿಲ್ಲ ' ಎಂದು ಉಕ್ರೇನ್ನ ಖಾರ್ವಿಕ್ ನಗರದ ವಿಎನ್ ಕರೇಜ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ನಾಲ್ಕನೇ ವರ್ಷದ ವ್ಯಾಸಾಂಗ ಮಾಡುತ್ತಿದ್ದ ಮೈಸೂರಿನ ವಿದ್ಯಾರ್ಥಿ ರೋಹಿತ್ ತಮ್ಮ ನೋವನ್ನು ತೋಡಿಕೊಂಡರು.
ವಾರ್ತಾಭಾರತಿ ರೋಹಿತ್ ಅವರನ್ನು ಶನಿವಾರ ಸಂಪರ್ಕ ಮಾಡಿ ಮಾತನಾಡಿಸಿದಾಗ ಅವರ ಅನುಭವವನ್ನು ಹಂಚಿಕೊಂಡರು.ಒಂದು ತಿಂಗಳಿಂದಲೂ ರಶ್ಯಾ ಉಕ್ರೇನ್ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾಹಿತಿ ಇತ್ತು, ಆದರೆ ಅದು ದೃಢ ಪಟ್ಟಿರಲಿಲ್ಲ, ನಮಗೆ ಫೆ.25 ರಂದು ಯುದ್ಧ ನಡೆಯಲಿದೆ ಎಂಬ ಖಚಿತ ಮಾಹಿತಿ ದೊರೆಯಿತು. ಆಗಲೂ ಭಾರತೀಯ ರಾಯಭಾರಿ ಕಚೇರಿಯವರು ಟ್ವಿಟರ್ ಮೂಲಕ ನೀವು ಎಲ್ಲಿದ್ದಿರೋ ಅಲ್ಲೇ ಇರಿ ಎಂಬ ಮಾಹಿತಿಯನ್ನೇ ನೀಡುತ್ತಿದ್ದರೇ ಹೊರತು ಸಹಾಯಕ್ಕೆ ಬರಲಿಲ್ಲ. ಆಗ ನಾವು ಶಾಪಿಂಗ್ ಮಾಲ್ಗಳಿಗೆ ಹೋಗಿ ನಮಗೆ ಬೇಕಾದ ಪದಾರ್ಥಗಳನ್ನು ಶೇಖರಿಸಿಕೊಳ್ಳಲು ಹೋದೆವು ಅ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳೆಲ್ಲವೂ ಸಂಪೂರ್ಣ ಕಿಕ್ಕಿರಿದು ತುಂಬಿದ್ದವು. ಕಷ್ಟಪಟ್ಟು ಕೆಲವು ಆಹಾರ ಪದಾರ್ಥಗಳನ್ನು ಶೇಖರಿಸಿದೆವು.
ಫೆ.28 ರಂದು ಉಕ್ರೇನ್ ಬಿಟ್ಟು ಹೋಗಿ ಎಂದು ರಾಯಭಾರಿ ಕಚೇರಿಯವರು ತಿಳಿಸಿದರು. ಆಗ ನಾವು ಭಾರತೀಯ ವಿಮಾನವನ್ನು ಬುಕ್ ಮಾಡಿದ್ದೆವು. ಅಷ್ಟರಲ್ಲಿ ವಿಮಾಯಾನ ರದ್ದಾಯಿತು ಎಂದು ಬಾವುಕರಾದರು.
ಬಳಿಕ ನಾವು ಭಾರತೀಯ ರಾಯಭಾರಿ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡುವ ಕೆಲಸ ಮಾಡಿದೆವು. ಆದರೆ ದೂರವಾಣಿ ಕರೆ ಸಿಗಲಿಲ್ಲ, ಆಗ ನಾವು ಮತ್ತು ಕೆಲವು ಸ್ನೇಹತರು ಸ್ವಂತ ಪರಿಶ್ರಮದಿಂದಲೇ ಉಕ್ರೇನ್ ಗಡಿಗೆ ತಲುಪಲು ನಿರ್ಧರಿಸಿದೆವು. ಆ ಸಂದರ್ಭದಲ್ಲಿ ಯುದ್ಧ ಪ್ರಾರಂಭವಾಗಿತ್ತು. ಆದರೆ ನಾವು ಇರುವ ಸ್ಥಳದಲ್ಲಿ ಯಾವುದೇ ದಾಳಿಯಾಗಿರಲಿಲ್ಲ. ಆದರೆ ಬೇರೆ ಕಡೆ ನಡೆಯುತ್ತಿದ್ದ ದಾಳಿಗಳು ನಮ್ಮ ಕಿವಿಗೆ ಬಡಿಯುತ್ತಿದ್ದವು. ಈ ಸಂದರ್ಭದಲ್ಲಿ ನಾವು ಇದ್ದ ಸ್ಥಳದಲ್ಲಿ ಕಫ್ರ್ಯೂ ಕೂಡ ವಿಧಿಸಲಾಗಿತ್ತು. ಇದಕ್ಕೂ ಮೊದಲು ನಾವು ಇದ್ದ ಖಾರ್ಕಿವ್ ನಗರದಿಂದ ಟ್ಯಾಕ್ಸಿ ಬುಕ್ ಮಾಡಿ ರೈಲ್ವೆ ನಿಲ್ದಾಣಕ್ಕೆ ಬಂದೆವು.
ಅಷ್ಟರಲ್ಲಿ ನಮ್ಮ ಅದೃಷ್ಟವೊ ಏನೊ ಒಂದು ಟ್ರೈನ್ ರೆಡಿಯಾಗಿ ನಿಂತಿತ್ತು. ಆಗ ನಾವು ಅದರಲ್ಲಿ ಪ್ರಯಾಣಿಸಿದೆವು. ಆಗ ಕೀವ್ ನಗರ ತಲುಪಿದೆವು. ಆಗ ಅಲ್ಲಿ ಬಹಳ ರಷ್ ಆಯಿತು. ಆ ಸಂದರ್ಭದಲ್ಲಿ ಉಕ್ರೇನಿಗಳು ಟ್ರೈನ್ನಲ್ಲಿ ತುಂಬಿಕೊಂಡರು. ಬೇರೆಯವರನ್ನು ಟ್ರೈನ್ ನಿಂದ ಎಳೆದು ಹೊರಹಾಕುತ್ತಿದ್ದರು. ನಮ್ಮನ್ನು ಎಳೆದು ಹಾಕುತ್ತಾರೆ ಎಂಬ ಭಯ ನಮ್ಮಲ್ಲಿ ಕಾಡಿತ್ತು. ಹೇಗೊ ದೇವರು ದೊಡ್ಡವನು ನಮ್ಮನ್ನು ಹೊರಗೆ ಕಳುಹಿಸಲಿಲ್ಲ. ಖಾರ್ಕೀವ್ ನಗರದಿಂದ ಪೋಲೆಂಡ್ ಗಡಿಗೆ ಎರಡು ಸಾವಿ ಕೀ.ಮಿ. ಇತ್ತು. ಸುಮಾರು 20 ಗಂಟೆ ಅನ್ನ ನೀರು ಏನು ಎಲ್ಲದೆ ಟ್ರೈನ್ನಲ್ಲೇ ನಿಂತು ಕೊಂಡು ಪ್ರಾಯಣ ಮಾಡಿ ಲೆವಿವ್ ತಲುಪಿದೆವು ಎಂದು ನೊಂದು ನುಡಿದರು.
ಲೆವಿವ್ ಗೆ ಬಂದ ನಂತರ ನಾವು ಹಂಗೇರಿ, ಪೋಲ್ಯಾಂಡ್, ರೋಮಿಯಾ ಗಡಿಗೆ ಹೋಗಬೇಕ ಎಂಬ ಚಿಂತನೆಯಲ್ಲಿದ್ದವು. ಪೋಲೆಂಡ್ನಲ್ಲಿ ಭಾರತೀಯರಿಗೆ ಹೊಡೆದು ಬಡಿದು ಹಿಂಸೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇತ್ತು.ಆಗ ಕೆಲವು ದೂರಾವಾಣಿ ಕರೆಗಳನ್ನು ನೀಡಿದ್ದರಿಂದ ಅವುಗಳನ್ನು ಸಂಪರ್ಕಿಸಿದೆವು. ಆಗ ಅವರು ಪೋಲೆಂಡ್ ಬಾರ್ಡರ್ಗೆ ಬರುವಂತೆ ತಿಳಿಸಿದರು. ಆಗ ನಾವು ಪೋಲೆಂಡ್ನ ಬುಡಮೆರ್ಸ್ ಬಾರ್ಡರ್ ಗೆ ಬಂದೆವು. ಆಗ ಭಾರತೀಯ ರಾಯಭಾರಿ ಅಧಿಕಾರಿಗಳು ಮತ್ತು ಸಚಿವರು ನಮ್ಮನ್ನು ಬರಮಾಡಿಕೊಂಡು ಸುರಕ್ಷಿತವಾಗಿ ಭಾರತಕ್ಕೆ ಕರೆತಂದರು ಎಂದು ಹೇಳಿದರು.
ಖಾರ್ಕಿವ್ ನಿಂದ ಲೆವಿವ್ಗೆ ಬರುವಷ್ಟರಲ್ಲಿ ಯದ್ಧ ಗೆದ್ದು ಬಂದಂಗಾಯಿತು. ಉಕ್ರೇನ್ನಲ್ಲಿ ಇರುವವರರೆಗೂ ನಮಗೆ ಭಾರತೀಯ ರಾಯಭಾರಿಯಾಗಲಿ ಉಕ್ರೇನ್ ರಾಯಬಾರಿಯಾಗಲಿ ಯಾರೂ ಸಹಾಯ ಮಾಡಲಿಲ್ಲ, ನಾವುಗಳು ನಮ್ಮ ಸ್ವಂತ ಶ್ರಮದಿಂದ ಕಷ್ಟಪಟ್ಟು ಪೋಲ್ಯಾಂಡ್ ಬಾರ್ಡರ್ ಸೇರಿದೆವು. ಭಾರತೀಯ ರಾಯಭಾರಿ ಮಾಹಿತಿ ಕೇಳಿದ್ದರೆ ನಾವುಗಳು ಇನ್ನೂ ಉಕ್ರೇನ್ ನಲ್ಲೇ ಇರಬೇಕಿತ್ತು. ಇನ್ನೂ ಕೆಲವರು ಉಕ್ರೇನ್ನಲ್ಲೇ ಇದ್ದಾರೆ ಎಂದು ಹೇಳಿದರು.
ದೇಶದಲ್ಲೇ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶಕ ಕಲ್ಪಿಸಿ: ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಾಂಗ ಮಾಡುತ್ತಿದ್ದ ನಮ್ಮ ವಿದ್ಯಾರ್ಥಿಗಳು ಅಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿ ಬಂದಿದ್ದಾರೆ. ಅವರು ಭವಿಷ್ಯದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ದೇಶದಲ್ಲೇ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶಕ ಕಲ್ಪಿಸಬೇಕು.
ನಮ್ಮ ದೇಶದಲ್ಲಿ ವೈದ್ಯಕೀಯ ವ್ಯಾಸಾಂಗಕ್ಕೆ ಹೆಚ್ಚಿನ ಅವಕಾಶ ಮತ್ತು ಸವಲತ್ತುಗಳಿದ್ದರೆ ನಾವು ವಿದೇಶಕ್ಕೆ ಏಕೆ ನಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿದ್ದೆವು. ನಮ್ಮ ಮಕ್ಕಳು ಪ್ರತಿಭಾವಂತರೇ, ಆದರೆ ಅವರಿಗೆ ಇಲ್ಲಿ ವ್ಯಾಸಾಂಗ ಮಾಡಲು ಅವಕಾಶ ಸಿಗದಿದ್ದರಿಂದ ವಿದೇಶಕ್ಕೆ ಕಳುಹಿಸಿದ್ದೇವೆ. ಸರ್ಕಾರ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ಅವಕಾಶ ಕಲ್ಪಿಸಲಿ.
-ವಿದ್ಯಾರ್ಥಿ ರೋಹಿತ್ ತಂದೆ ಮಾಯಾಂಗ