ʼಕೆಕೆಎಂಎʼ ಕರ್ನಾಟಕ ಶಾಖೆಯ ನೂತನ ಅಧ್ಯಕ್ಷರಾಗಿ ಯೂಸುಫ್ ರಶೀದ್ ಆಯ್ಕೆ
ಕುವೈತ್ : ಕುವೈತ್‌ನಲ್ಲಿರುವ ಭಾರತೀಯ ವಲಸಿಗರ ಅತಿದೊಡ್ಡ ಸಾಮಾಜಿಕ ಸೇವಾ ಸಂಸ್ಥೆಯಾದ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್ (ಕೆಕೆಎಂಎ) ನ ಕೆಕೆಎಂಎ ಕರ್ನಾಟಕ ಶಾಖೆಯು 9ನೇ ಎಜಿಎಂ ಅನ್ನು ಕ್ಯಾಲಿಕಟ್ ಲೈವ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಕೆಕೆಎಂಎ ಕೇಂದ್ರ ಸಮಿತಿಯ ಚುನಾವಣಾಧಿಕಾರಿ ಮುನೀರ್ ಕೋಡಿ ಅವರ ಮೇಲ್ವಿಚಾರಣೆಯಲ್ಲಿ ಶುಕ್ರವಾರ ಆಯೋಜಿಸಲಾಯಿತು.
2022-2023ರ ನೂತನ ಅಧ್ಯಕ್ಷರಾಗಿ ಯೂಸುಫ್ ರಶೀದ್ ಅವಿರೋಧವಾಗಿ ಆಯ್ಕೆಯಾದರು.
ಮೌಲಾನಾ ಜಾವಿದ್ ಮುಹಮ್ಮದ್ ಕರ್ಜಿಕರ್ ಅವರ ಪವಿತ್ರ ಕುರ್‌ಆನ್ ಪಠಣದೊಂದಿಗೆ ಸಭೆಯು ಪ್ರಾರಂಭವಾಯಿತು. ಶಾಖಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಮುನಿಯಂ ಸ್ವಾಗತಿಸಿದರು. ಕೆಕೆಎಂಎ ಹಿರಿಯ ಪಿಎಂಟಿ ಸದಸ್ಯ ಇಬ್ರಾಹಿಂ ಕುನ್ನಿಲ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕೆಕೆಎಂಎ-ಕರ್ನಾಟಕ ಶಾಖೆಯ ಸಮುದಾಯ ಸೇವೆ ಮತ್ತು ಸಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ಕೊಡುಗೆಯನ್ನು ಶ್ಲಾಘಿಸಿದರು. ಶಾಖೆಯ ಸಾಮಾಜಿಕ ಯೋಜನೆಗಳ ಉಪಾಧ್ಯಕ್ಷ ಅಬ್ದುಲ್ ಲತೀಫ್ ಶೇಡಿಯಾ, ಶಾಖೆಯ ಕಳೆದ ಮೂರು ವರ್ಷಗಳ ಚಟುವಟಿಕೆಗಳ ಕುರಿತು ವಾರ್ಷಿಕ ವರದಿಯನ್ನು ಓದಿದರು.
ನಿರ್ಗಮಿತ ಅಧ್ಯಕ್ಷ ಎಸ್.ಎಂ. ಅಝರ್ ರನ್ನು ಸಮಾಜ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಸನ್ಮಾನಿಸಲಾಯಿತು. ಈ ವೇಳೆ ಅಝರ್ ಅವರು ಕೆಕೆಎಂ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಅವರ ನಿಸ್ವಾರ್ಥ ಸೇವೆಗಳಿಗಾಗಿ ಮತ್ತು ತಮ್ಮ ಅಧಿಕಾರಾವಧಿಯಲ್ಲಿ ಸದಸ್ಯರು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಯೂಸುಫ್ ರಶೀದ್ ತಮ್ಮ ಭಾಷಣದಲ್ಲಿ ಕೆಕೆಎಂಎ ಒದಗಿಸಿದ ಅವಕಾಶಕ್ಕೆ ಆಭಾರಿಯಾದರು ಮತ್ತು ಸಮುದಾಯದ ಹೆಚ್ಚಿನ ಸದಸ್ಯರನ್ನು ತಲುಪಲು ಸಮಿತಿ ಮತ್ತು ಸಮುದಾಯವನ್ನು ಮುನ್ನಡೆಸಲು ಸದಸ್ಯರು ಮುಂದೆ ಬರಬೇಕೆಂದು ವಿನಂತಿಸಿದರು.
ಕೆಕೆಎಂಎ ಕೇಂದ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಸಲಾಂ ಎಪಿ ಅವರು ತಮ್ಮ ಭಾಷಣದಲ್ಲಿ ನಿರ್ಗಮಿತ ಅಧ್ಯಕ್ಷರು ಮತ್ತು ತಂಡಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ನೂತನ ಪದಾಧಿಕಾರಿ ತಂಡವನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಭಾಗವಹಿಸಿದ್ದರು ಮತ್ತು ಊಟೋಪಚಾರ ವ್ಯವಸ್ಥೆಯನ್ನೂ ಒದಗಿಸಲಾಗಿತ್ತು. ಅಬ್ದುಲ್ ಜಬ್ಬಾರ್ ಗುರುಪುರ ಕಾರ್ಯಕ್ರಮವನ್ನು ನಿರ್ವಹಿಸಿದರು. ಐಟಿ ಮತ್ತು ಸಂವಹನ ಕಾರ್ಯದರ್ಶಿ ಮಾಬಿಯಾ ಆದಂ ಕಡಬ ವಂದಿಸಿದರು.
2022-23ಕ್ಕೆ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳು:
ಯೂಸುಫ್ ರಶೀದ್- ಅಧ್ಯಕ್ಷರು
ಮೊಹಮ್ಮದ್ ಯೂಸುಫ್ ಮುನಿಯಂ - ಕಾರ್ಯಾಧ್ಯಕ್ಷ
ಮೊಹಮ್ಮದ್ ಅಮೀನ್ ಶೇಖ್ - ಪ್ರಧಾನ ಕಾರ್ಯದರ್ಶಿ
ಅಬೂಬಕ್ಕರ್ ಶೇಖ್ ತುಂಬೆ - ಖಜಾಂಚಿ
ಇಮ್ತಿಯಾಝ್ ಸೂರಿಂಜೆ - ಸಂಘಟನಾ ಕಾರ್ಯದರ್ಶಿ
ಇರ್ಷಾದ್ ಮುಲ್ಕಿ - ಆಡಳಿತ ಕಾರ್ಯದರ್ಶಿ
ಮಾಬಿಯಾ ಆದಂ ಕಡಬ - ಐಟಿ ಮತ್ತು ಸಂವಹನ ಕಾರ್ಯದರ್ಶಿ
ಅಬ್ದುಲ್ ರಹಿಮಾನ್ ಕಾನಾ - ಕುಟುಂಬದ ಪ್ರಯೋಜನಗಳು
ಅಬ್ದುಲ್ ಅಝೀಝ್ ಗೌಸ್ - ಸದಸ್ಯತ್ವ / MWS / ಪಿಂಚಣಿ
ರಿಯಾಝ್ ಕಾವಾ - ಸಾಮಾಜಿಕ ಯೋಜನೆ
ಶರೀಫ್ ಅಹ್ಮದ್ ಮುಲ್ಕಿ - ಪರಿಹಾರ ಮತ್ತು ಧಾರ್ಮಿಕ
ನೌಶಾದ್ ಬಜ್ಪೆ - ಮ್ಯಾಗ್ನೆಟ್
ಶಕೀಲ್ ಅಹ್ಮದ್ - ನಾಯಕತ್ವ ಮತ್ತು ಅಭಿವೃದ್ಧಿ
ರಮ್ಲಾನ್ ಭಟ್ರತೋಟ – ಫ್ಯಾಮಿಲಿ ಕ್ಲಬ್
ರಿಯಾಝ್ ಅಹ್ಮದ್ - ಕಲೆ ಮತ್ತು ಕ್ರೀಡೆ