ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ
ಮಲ್ಪೆ : ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ಮನನೊಂದ ವ್ಯಕ್ತಿಯೊಬ್ಬರು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಕಲ್ಯಾಣಪುರ ಮೂಡುಬೆಟ್ಟು ನಿವಾಸಿ ಸೆಂಥಿಲ್ ವಡಿವೇಲಿನ್ (56) ಎಂದು ಗುರುತಿಸಲಾಗಿದೆ. ಇವರು ಮುಂಬೈಯ ಬಟ್ಟೆ ಕಂಪೆನಿಯೊಂದರ ಕರ್ನಾಟಕ ರಾಜ್ಯದ ಡಿಲರ್ ಶಿಪ್ ತೆಗೆದುಕೊಂಡು ಕಮಿಷನ್ ಹಣಕ್ಕಾಗಿ ದುಡಿಯುತ್ತಿದ್ದರು. ಈ ಸಂಬಂಧ ಕೆಲವು ಮಂದಿ ಹಣ ಬಾಕಿ ಇರಿಸಿರುವುದ ರಿಂದ ಸೆಂಥಿಲ್‌ಗೆ ಕಮೀಷನ ಹಣ ಬಾರದೆ ಆರ್ಥಿಕ ಅಡಚಣೆ ಉಂಟಾಗಿತ್ತು ಎನ್ನಲಾಗಿದೆ.
ಇದೇ ಚಿಂತೆಯಲ್ಲಿ ಹಾಗೂ ಅನಾರೋಗ್ಯದಿಂದ ಮನನೊಂದ ಅವರು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೆಡ್ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story