ರಾಜ್ಯ ಮಟ್ಟದ ಕರಾಟೆ: ಪ್ರನುಷಾ ಪ್ರಥಮ
ರಾಷ್ಟ್ರಮಟ್ಟಕ್ಕೆ ತೇರ್ಗಡೆ
ಉಡುಪಿ : ಸ್ಥಳೀಯ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ಶ್ರೀಅನಂತೇಶ್ವರ ಆಂಗ್ಲಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರನುಷಾ ಮಹೇಶ್ ಇವರು ಕಳೆದ ವಾರ ಹೈದರಾಬಾದ್‌ನಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೆಡೆಟ್ 14-15 ವಯೋಮಿತಿಯ 47 ಕೆ.ಜಿ ವಿಭಾಗ ದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದರಿಂದ ಪ್ರನುಷಾ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದಾರೆ. ಈ ಸಾಧನೆಗಾಗಿ ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕಿ ಹಾಗೂ ಅಧ್ಯಾಪಕರು ಪ್ರನುಷಾರನ್ನು ಅಭಿನಂದಿಸಿದ್ದಾರೆ.
Next Story