ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳ ಸಂದರ್ಶನ ಪುನರಾರಂಭ
ಉಡುಪಿ : ಜಿಲ್ಲಾ ಕಾರಾಗೃಹದಲ್ಲಿರುವ ಬಂಧಿಗಳಿಗೆ ಮಾರ್ಚ್ 21ರಿಂದ ಕೋವಿಡ್ ಮಾರ್ಗಸೂಚಿಯನ್ವಯ ನೇರ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದ್ದು, ನಿಗದಿತ ಸಂದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುವುದು.
ಬಂಧಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿ ಕಾರಾಗೃಹದ ಅಧೀಕ್ಷಕರ ಕಚೇರಿಯ ದೂರವಾಣಿ ಸಂಖ್ಯೆ: ೦೮೨೦-೨೫೦೪೧೦೧, ಮೊ.ನಂ: ೯೪೮೦೮೦೬೪೬೨ ಹಾಗೂ ಇ-ಮೇಲ್ - dpudp.prisons-kar@gov.in- ಅನ್ನು ಸಂಪರ್ಕಿಸಿ, ವಿವರಗಳೊಂದಿಗೆ ಸಂದರ್ಶನಕ್ಕೆ ನೋಂದಾಯಿಸಿ, ನಿಗದಿಪಡಿಸಿದ ದಿನ ಮತ್ತು ಸಮಯ ಸಂದರ್ಶನಕ್ಕೆ ಆಗಮಿಸಬಹುದು ಎಂದು ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
Next Story