ಹಿಜಾಬ್ ತೀರ್ಪಿನಿಂದ ನಿರಾಶೆ: ಸೂರಲ್ಪಾಡಿ ಫ್ರೆಂಡ್ಸ್ ಅಸೋಸಿಯೇಟೆಡ್ ಟ್ರಸ್ಟ್ (ರಿ)
ಜಿದ್ದಾ: ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪು ನಿರಾಶೆ ತಂದಿದೆ ಎಂದು ಸೂರಲ್ಪಾಡಿ ಫ್ರೆಂಡ್ಸ್ ಅಸೋಸಿಯೇಟೆಡ್ ಟ್ರಸ್ಟ್ (ರಿ) ಸೌದಿ ಅರೇಬಿಯಾ, ಯು.ಎ.ಇ, ಒಮಾನ್, ಕತಾರ್ ಹಾಗೂ ಬಹರೈನ್ ಘಟಕಗಳು ಪ್ರಕಟಣೆಯಲ್ಲಿ ತಿಳಿಸಿವೆ.
ದೇಶದ ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕನ್ನು ನ್ಯಾಯಾಲಯದ ತೀರ್ಪು ಎತ್ತಿ ಹಿಡಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹೈಕೋರ್ಟ್ ಶಿಕ್ಷಣದ ಹಕ್ಕಿಗಿಂತ ಸಮವಸ್ತ್ರಕ್ಕೆ ಹೆಚ್ಚು ಮಹತ್ವ ನೀಡಿರುವುದು ಖೇದಕರ ಎಂದು ಪ್ರಕಟಣೆ ತಿಳಿಸಿದೆ.
Next Story