ಉಡುಪಿ ಜಿಲ್ಲೆಯ ಇಬ್ಬರಲ್ಲಿ ಕೊರೋನ ಸೋಂಕು ಪತ್ತೆ
ಉಡುಪಿ : ಉಡುಪಿ ತಾಲೂಕಿನ ಇಬ್ಬರು ಪುರುಷರು ಇಂದು ಕೋವಿಡ್-19ಕ್ಕೆ ಪಾಸಿಟಿವ್ ಬಂದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 9ಕ್ಕೇರಿದೆ.
ದಿನದಲ್ಲಿ ಒಟ್ಟು 360 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಉಡುಪಿ ತಾಲೂಕಿನ 255 ಮಂದಿಯಲ್ಲಿ ಇಬ್ಬರು ಪಾಸಿಟಿವ್ ಬಂದಿದ್ದರೆ, ಕುಂದಾಪುರದ 63 ಹಾಗೂ ಕಾರ್ಕಳ ತಾಲೂಕಿನ ೪೨ ಮಂದಿಯಲ್ಲಿ ಯಾರೂ ಸೋಂಕಿತರು ಪತ್ತೆಯಾಗಿಲ್ಲ.
ದಿನದಲ್ಲಿ ಯಾರೂ ಸೋಂಕಿನಿಂದ ಚೇತರಿಸಿಕೊಂಡಿಲ್ಲ. ಜ.೧ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ೧೮,೪೩೬ ಆದರೆ, ಚೇತರಿಸಿ ಕೊಂಡವರ ಸಂಖ್ಯೆ ೧೮೪೯೪ ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.
೮೬೯ ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ೧೨ರಿಂದ ೧೪ವರ್ಷದೊಳಗಿನ ಒಟ್ಟು ೮೬೯ ಮಕ್ಕಳಿಗೆ ಕೋವಿಡ್‌ನ ಮೊದಲ ಡೋಸ್ ಲಸಿಕೆಯನ್ನು ನೀಡಲಾ ಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೭,೦೩೦ ಮಕ್ಕಳು ಈ ಲಸಿಕೆಯನ್ನು ಪಡೆದಂತಾಗಿದೆ.
ಅಲ್ಲದೇ ದಿನದಲ್ಲಿ ಒಟ್ಟು ೧೫೮೬ ಮಂದಿ ಇಂದು ಲಸಿಕೆಯನ್ನು ಪಡೆದು ಕೊಂಡಿದ್ದಾರೆ. ೬೦ ವರ್ಷ ಮೇಲಿನ ೧೮೩ ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು ೧೯೬ ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ಒಟ್ಟು ೮೮೧ ಮಂದಿ ಮೊದಲ ಡೋಸ್ ಹಾಗೂ ೫೦೯ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.