ʼಸ್ವಚ್ಛ ಕಡಲತೀರ-ಹಸಿರು ಕೋಡಿ-2022ʼ ಅಭಿಯಾನದ 3ನೇ ಹಂತದ ಸ್ವಚ್ಛತಾ ಕಾರ್ಯಕ್ರಮ
ಕುಂದಾಪುರ : ಸ್ವಚ್ಛ ಕಡಲತೀರ-ಹಸಿರು ಕೋಡಿ-2022ರ ಅಭಿಯಾನದ ಮೂರನೇ ಹಂತದ ಸ್ವಚ್ಛತಾ ಕಾರ್ಯಕ್ರಮ ರವಿವಾರ ಕೋಡಿ ಯಲ್ಲಿ ಜರಗಿತು.
ಕೋಡಿ ಬ್ಯಾರೀಸ್ ವಿದ್ಯಾಸಂಸ್ಥೆಗಳ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಆಶಯದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಊರಿನ ಪ್ರಮುಖರು ಮತ್ತು ನಿಸರ್ಗ ಪ್ರಿಯರು ಉತ್ಸಾಹ ದಿಂದ ಪಾಲ್ಗೊಂಡು ಕೋಡಿಯ ಕಡಲತೀರವನ್ನು ಸ್ವಚ್ಛಗೊಳಿಸಿದರು.
ಕುಂದಾಪುರ ಪುರಸಭೆ ಹಾಗೂ ಕೋಟೇಶ್ವರ ಗ್ರಾಪಂ ಸಹಕಾರದೊಂದಿಗೆ ಸಂಗ್ರಹಿಸಲಾದ ಕಸದ ವಿಲೇವಾರಿ ಮಾಡಲಾಯಿತು.
Next Story