ಯುಎಇ ಯೂನಿಟ್ - ಉಚ್ಚಿಲ ಜಮಾತ್ ಸ್ಥಾಪನೆ
ದುಬೈ: ಸೋಮೇಶ್ವರ್ ಉಚ್ಚಿಲ ಜಮಾತ್ ನ ಪರಿಧಿಗೆ ಒಳಪಟ್ಟ ಯುಎಇಯಲ್ಲಿ ನೆಲೆಸಿರುವ ಅನಿವಾಸಿಗಳು ಸಂಘಟಿತರಾಗಿ “ಯುಎಇ ಯೂನಿಟ್ -ಉಚ್ಚಿಲ ಜಮಾತ್ʼʼ ಎಂಬ ಸಂಘಟನೆಯನ್ನು ಸ್ಥಾಪಿಸಲಾಯಿತು.
ಅಬ್ದುಲ್ ಹಮೀದ್ ಉಚ್ಚಿಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅಹ್ಮದ್ ನವಾಝ್ ಕಿರಾಅತ್ ಪಠಣದೊಂದಿಗೆ ಪ್ರಾರಂಭವಾದ ಸಭೆಯನ್ನು ಅಬ್ದುಲ್ ಮುಜೀಬ್ ನಡೆಸಿಕೊಟ್ಟರು. ನವಾಝ್ ಉಚ್ಚಿಲ್ ಅತಿಥಿಗಳನ್ನು ಸ್ವಾಗತಿಸಿದರು.
ಮೊಹಮ್ಮದ್ ಅಲಿ ಉಚ್ಚಿಲ್ ಸಭೆ ಕರೆದ ಉದ್ದೇಶ, ಉಚ್ಚಿಲ ಜಮಾತ್ ಪರಿಧಿಯಲ್ಲಿ ಬರುವ ಯುಎಇಯಲ್ಲಿ ನೆಲೆಸಿರುವ ಅನಿವಾಸಿಗಳು ಸಂಘಟಿತರಾಗಿ, ಪರಸ್ಪರರನ್ನು ಅರಿತು, ಕಷ್ಟ ಸುಖಗಳಲ್ಲಿ ಭಾಗಿಯಾಗಲು ಮತ್ತು ಸಮುದಾಯ ಸೇವೆಗೈಯ್ಯಲು ಎಂದು ವಿವರಿಸಿದರು.
ಯೂನಿಟ್ ಪದಾಧಿಕಾರಿಗಳು ಮತ್ತು ಕಮಿಟಿ ಸದಸ್ಯರನ್ನು ಆರಿಸಲಾಯಿತು. ಫಾಹಿಮ್ ಉಚ್ಚಿಲ್ ವಂದಿಸಿದರು.