ಉಡುಪಿ: ಒಬ್ಬನಲ್ಲಿ ಕೊರೋನ ಸೋಂಕು, ಇಬ್ಬರು ಗುಣಮುಖ
ಉಡುಪಿ : ಜಿಲ್ಲೆಯಲ್ಲಿ ಇಂದು ಒಬ್ಬ ಮಹಿಳೆ ಕೋವಿಡ್-19 ಸೋಂಕಿ ಪಾಸಿಟಿವ್ ಬಂದಿದ್ದು, ಇಬ್ಬರು ಸೋಂಕಿನಿದ ಗುಣಮುಖ ರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ.
ದಿನದಲ್ಲಿ ಒಟ್ಟು ೨೨೯ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಉಡುಪಿ ತಾಲೂಕಿನ ೧೦೦ ಮಂದಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾದರೆ, ಕುಂದಾಪುರದ ೫೦ ಹಾಗೂ ಕಾರ್ಕಳ ತಾಲೂಕಿನ ೭೯ ಮಂದಿಯಲ್ಲಿ ಯಾರೂ ಸೋಂಕಿತರು ಪತ್ತೆಯಾಗಿಲ್ಲ.
ದಿನದಲ್ಲಿ ಇಬ್ಬರು ಗುಣಮುಖರಾಗಿರುವುರಿಂದ ನಾಲ್ವರು ಚಿಕಿತ್ಸೆಯಲ್ಲಿದ್ದಾರೆ. ಎಲ್ಲರೂ ಅವರವರ ಮನೆಗಳಲ್ಲಿ ಚೇತರಿಸಿಕೊಳ್ಳುತಿದ್ದಾರೆ. ಜ.೧ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ೧೮,೪೩೭ ಆದರೆ, ಚೇತರಿಸಿ ಕೊಂಡವರ ಸಂಖ್ಯೆ ೧೮೫೦೦ ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.
೧೨೧೫ ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ೧೨ರಿಂದ ೧೪ವರ್ಷದೊಳಗಿನ ಒಟ್ಟು ೧೨೧೫ ಮಕ್ಕಳಿಗೆ ಕೋವಿಡ್‌ನ ಮೊದಲ ಡೋಸ್ ಲಸಿಕೆಯನ್ನು ನೀಡಲಾ ಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೮,೮೧೦ ಮಕ್ಕಳು ಈ ಲಸಿಕೆಯನ್ನು ಪಡೆದಂತಾಗಿದೆ.
ದಿನದಲ್ಲಿ ಒಟ್ಟು ೩೦೧೭ ಮಂದಿ ಇಂದು ಲಸಿಕೆಯನ್ನು ಪಡೆದು ಕೊಂಡಿದ್ದಾರೆ. ೬೦ ವರ್ಷ ಮೇಲಿನ ೪೪೭ ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು ೪೫೯ ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ಒಟ್ಟು ೧೨೫೮ ಮಂದಿ ಮೊದಲ ಡೋಸ್ ಹಾಗೂ ೧೩೦೦ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.