ಅನಾರೋಗ್ಯ ಪೀಡಿತ ವ್ಯಕ್ತಿ ಆತ್ಮಹತ್ಯೆ : ಕೇಸು ದಾಖಲಿಸದಂತೆ ಡೆತ್‌ನೋಟ್‌ನಲ್ಲಿ ಮನವಿ
ಮಣಿಪಾಲ : ಮರಣ ಪತ್ರ ಬರೆದಿಟ್ಟು ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.31ರಂದು ರಾತ್ರಿ ಕುಂಜಿ ಬೆಟ್ಟುವಿನ ವಿ.ಪಿ.ನಗರ ಎಂಬಲ್ಲಿ ನಡೆದಿದೆ.
ಮೃತರನ್ನು ರಾಮಚಂದ್ರ ಭಟ್ ಎಂದು ಗುರುತಿಸಲಾಗಿದೆ.
ಇವರು ಮನೆಯ ಅಡುಗೆ ಕೋಣೆಯ ಹಿಂದೆ ಇರುವ ಸೀಟಿನ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಪತ್ತೆಯಾದ ಡೆತ್‌ನೋಟಿನಲ್ಲಿ, ನಾನು ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಇದಕ್ಕೆ ಬೇರೆ ಯಾರು ಕಾರಣರಲ್ಲ. ಪೊಲೀಸ್ ಅಧಿಕಾರಿಗಳು ದಯಮಾಡಿ ಕೇಸ್ ದಾಖಲಿಸಿ ನನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ರಾಮಚಂದ್ರ ಭಟ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story