ಮುಂಬೈಯಲ್ಲಿ ಭಾರತದ ಮೊದಲ ಕೊರೋನ ವೈರಸ್ ರೂಪಾಂತರಿ XE ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ
ಮುಂಬೈ: ಭಾರತದ ಮೊದಲ ಕೊರೋನ ವೈರಸ್ ರೂಪಾಂತರಿ XE ಪ್ರಕರಣವು ಬುಧವಾರ ಮುಂಬೈನಲ್ಲಿ ವರದಿಯಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಕಪ್ಪಾ ರೂಪಾಂತರದ ಒಂದು ಪ್ರಕರಣವೂ ಪತ್ತೆಯಾಗಿದೆ. ವೈರಸ್ನ ಹೊಸ ರೂಪಾಂತರಗಳನ್ನು ಹೊಂದಿರುವ ರೋಗಿಗಳು ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಕಾರ್ಪೊರೇಶನ್ ಮೂಲಗಳು ತಿಳಿಸಿವೆ.
ಹೊಸ ರೂಪಾಂತರಿ ತಳಿಯು ಯಾವುದೇ ಕೋವಿಡ್-19 ರೂಪಾಂತರಿಗಿಂತ ಹೆಚ್ಚು ತೀವ್ರವಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ಹೇಳಿತ್ತು. ಅದಾಗಿ, ಒಂದೇ ವಾರದಲ್ಲಿ ಮುಂಬೈಯಲ್ಲಿ ಒಂದು ಪ್ರಕರಣ ಕಂಡುಬಂದಿದೆ.
XE ರೂಪಾಂತರಿಯು ಹೆಚ್ಚು ವ್ಯಾಪಕವಾಗಿ ಹರಡದಿದ್ದರೂ ಮುಂಬರುವ ದಿನಗಳಲ್ಲಿ ಈ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಇದು ಅತ್ಯಂತ ಪ್ರಬಲವಾದ ರೂಪಾಂತರಿ ಆಗಲಿದೆ ಎಂದು ಹೇಳಲಾಗಿದೆ. XE ರೂಪಾಂತರಿಯು ಜನವರಿ 19ರಂದು ಇಂಗ್ಲೆಂಡ್ ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು.
Next Story