ಗಂಗೊಳ್ಳಿ ಬೆಂಕಿ ಅವಘಡ: ಮೃತರ ಮನೆಗೆ ಜಮಾಅತೆ ಇಸ್ಲಾಮಿ ಹಿಂದ್ ನಿಯೋಗ ಭೇಟಿ
ಉಡುಪಿ : ಇತ್ತಿಚೆಗೆ ಗಂಗೊಳ್ಳಿಯಲ್ಲಿ ಬೆಂಕಿ ಅವಘಢದಿಂದ ಮನೆ ಸಮೇತ ಸಜೀವ ದಹನಗೊಂಡು ಸಾವಿಗೀಡಾದ ಮೀನುಗಾರ ಸಮುದಾಯದ ಗಣೇಶ್ ಖಾರ್ವಿ ಅವರ ಮನೆಗೆ ಜಮಾಅತೆ ಇಸ್ಲಾಮಿ ಹಿಂದ್ ನಿಯೋಗ ಬುಧವಾರ ಭೇಟಿ ನೀಡಿತು.
ಮನೆ ಸುಟ್ಟು ಕರಕಲಾಗಿದ್ದ ಕಾರಣ ಅವರ ಕುಟುಂಬ ಮೃತರ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದು, ನಿಯೋಗ ಮೃತರ ಸಹೋದರ, ಮೃತರ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ನಿಯೋಗವು ಕುಟುಂಬಕ್ಕೆ ಪ್ರಾಥಮಿಕ ಸಹಾಯವನ್ನು ನೀಡಿತು. ಸಂಬಂಧ ಪಟ್ಟ ಇಲಾಖೆಯಿಂದ ಮೃತರ ಕುಟುಂಬಕ್ಕೆ ಪರ್ಯಾಯ ಪರಿಹಾರ ಒದಗಿಸಬೇಕೆಂದು ನಿಯೋಗವು ಆಗ್ರಹಿಸಿದೆ.
ನಿಯೋಗದಲ್ಲಿ ಸ್ಥಾನೀಯ ಜಮಾಅತೆ ಇಸ್ಲಾಮಿ ಹಿಂದ್‌ನ ಪ್ರಮುಖರಾದ ಮಹಮ್ಮದ್ ಅಶ್ರಫ್, ಇಕ್ಬಾಲ್ ಗಂಗೊಳ್ಳಿ, ಇಬ್ರಾಹಿಂ ಚೌಗುಲೆ ಉಪಸ್ಥಿತರಿದ್ದರು.
Next Story