ಹಾಲಾಡಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಉಡುಪಿ, ಎ.೧೨: ಈ ತಿಂಗಳ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಎ.೧೬ರಂದು ಬೆಳಗ್ಗೆ ೧೦:೩೦ಕ್ಕೆ ಹಾಲಾಡಿಯ ಶಾಲಿನಿಜಿ ಶಂಕರ್ ಕನ್ವೆಷನ್ ಸೆಂಟರ್‌ನಲ್ಲಿ ಹಾಗೂ ಅಪರಾಹ್ನ ೩:೩೦ಕ್ಕೆ ಅಮಾಸೆಬೈಲಿನ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಕೂಡಕಟ್ಟು ಶ್ಯಾಮಿಹಕ್ಲುನಲ್ಲಿ ನಡೆಯಲಿದೆ.
ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಪಂ ಮತ್ತು ಅಮಾಸೆಬೈಲು ಗ್ರಾಮದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ಆಯಾ ಗ್ರಾಮದ ಗ್ರಾಮಕರಣಿಕರಿಗೆ ನೀಡಿ, ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story