ಬೈಕ್ ಮರಕ್ಕೆ ಢಿಕ್ಕಿ: ಸಹಸವಾರ ಮೃತ್ಯು
ಅಮಾಸೆಬೈಲು : ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟ ಘಟನೆ ಸೋಮೇಶ್ವರ-ಮಾಂಡಿ ಮೂರುಕೈ ರಸ್ತೆಯಲ್ಲಿ ಮಡಾಮಕ್ಕಿ ಶಾಲೆಯ ಬಳಿ ಎ.18ರಂದು ನಸುಕಿನ ವೇಳೆ ನಡೆದಿದೆ.
ಮೃತರನ್ನು ಬೈಕಿನ ಹಿಂಬದಿ ಸವಾರ ರಾಜೇಶ್ ನಾಯ್ಕ್ ಎಂದು ಗುರು ತಿಸಲಾಗಿದೆ. ಬೈಕ್ ಸವಾರ ಮನೋರಂಜನ ಪೂಜಾರಿ ಗಾಯಗೊಂಡಿದ್ದಾರೆ. ಮನೋರಂಜನ ತನ್ನ ಬೈಕಿನಲ್ಲಿ ರಾಜೇಶ ನಾಯ್ಕರನ್ನು ಹಿಂಬದಿ ಸವಾರರಾಗಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಜೇಶ ನಾಯ್ಕ ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story