ರಾಜಕುಮಾರ ಉತ್ತಮ ಚಿತ್ರ ಪ್ರಶಸ್ತಿ ಅಪ್ಪುಗೆ ಅರ್ಪಣೆ: ಹೊಂಬಾಳೆ ಫಿಲ್ಮ್ಸ್
ಬೆಂಗಳೂರು: 'ಹೊಸ ಪರ್ವ..! ನಾಳೆ ಬೆಳಗ್ಗೆ 9.50ಕ್ಕೆ ನಿಮ್ಮ ಮುಂದೆ ತೆರೆದಿಡಲಿದ್ದೇವೆ’’ ಎಂದು ಕೂ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೊಸ ಘೋಷಣೆ ಮಾಡಿದೆ.
'2017ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಪುನೀತ್ ರಾಜ್ಕುಮಾರ್ ಅಭಿನಯದ ನಮ್ಮ “ರಾಜಕುಮಾರ” ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಈ ಪ್ರಶಸ್ತಿಯನ್ನು ಅಪ್ಪು ಅವರಿಗೆ ಅರ್ಪಿಸುತ್ತಿದ್ದೇವೆ, ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ' ಎಂದು ಸಂಸ್ಥೆ ತಿಳಿಸಿದೆ.
Next Story