ಸೌದಿ ಅರೇಬಿಯಾದಲ್ಲಿ ಮೇ 2ರಂದು ಈದುಲ್ ಫಿತ್ರ್: ಅಧಿಕೃತ ಘೋಷಣೆ
ಜಿದ್ದಾ: ಎಪ್ರಿಲ್ 30 ಶನಿವಾರದಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಈದುಲ್ ಫಿತ್ರ್ ಸೋಮವಾರದಂದು ಆಚರಿಸಲಾಗುತ್ತದೆ ಎಂದು ಅಧಿಕೃತ ಪ್ರಕಟನೆ ಹೊರಡಿಸಿದ್ದಾಗಿ khaleejtimes ವರದಿ ಮಾಡಿದೆ. ಈದುಲ್ ಫಿತ್ರ್ ಮೇ 2 ಸೋಮವಾರದಂದು ಆಚರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಜರಿ ಕ್ಯಾಲೆಂಡರ್ ನ ಶವ್ವಾಲ್ 1ನೇ ದಿನದಂದು ಈದುಲ್ ಫಿತ್ರ್ ಅನ್ನು ಆಚರಿಸಲಾಗುತ್ತದೆ. ಈ ನಡುವೆ ಯುಎಇ ಚಂದ್ರನ ವೀಕ್ಷಣೆ ಸಮಿತಿಯು ತಮ್ಮ ಅಧಿಕೃತ ಘೋಷಣೆಯನ್ನು ಮಾಡಲು ಸಿದ್ಧವಾಗಿದೆ ಎಂದು ವರದಿ ಉಲ್ಲೇಖಿಸಿದೆ.
Next Story