varthabharthi


ಕರಾವಳಿ

ಚಿತ್ತಾರಿ ಚಾಮುಂಡಿಕುನ್ನುವಿನಲ್ಲಿ ರಸ್ತೆ ಅಪಘಾತ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ

ವಾರ್ತಾ ಭಾರತಿ : 14 May, 2022

ಕಾಸರಗೋಡು, ಮೇ 14: ರಾಜ್ಯ ಹೆದ್ದಾರಿಯ ಚಿತ್ತಾರಿ ಚಾಮುಂಡಿಕುನ್ನು ಎಂಬಲ್ಲಿ ಗುರುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಯುವಕರು ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

ಪೂಚಕ್ಕಾಡ್ ಮೂಕಾಡ ನಿವಾಸಿ ಸಬೀರ್ (25) ಮತ್ತು  ಸುಧೀಶ್ (38) ಮೃತಪಟ್ಟವರು. ಮೂಕಾಡ್ ನ ಸಾದತ್(32) ಎಂಬವರು ಗುರುವಾರ ರಾತ್ರಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆಯೇ ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ಚಾಮುಂಡಿಕುನ್ನು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮನೆಯ ಆವರಣ ಗೋಡೆಗೆ ಬಡಿದು ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಆವರಣ ಗೋಡೆ ಕುಸಿದು ಕಾರಿನ ಮೇಲೆಯೇ ಬಿದ್ದಿತ್ತು. ಕಾರಿನೊಳಗೆ ಸಿಲುಕಿ ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪರಿಸರವಾಸಿಗಳು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)