varthabharthi


ರಾಷ್ಟ್ರೀಯ

ಕೇರಳದ ರೂಪದರ್ಶಿ, ನಟಿ ಶಹಾನಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಪತಿಯ ಬಂಧನ

ವಾರ್ತಾ ಭಾರತಿ : 14 May, 2022

Photo: instagram

ತಿರುವನಂತಪುರ: ಕೇರಳದ 20 ವರ್ಷದ ರೂಪದರ್ಶಿ ಹಾಗೂ  ನಟಿ ಕೇರಳದ ಕೋಝಿಕ್ಕೋಡ್ ನಗರದ ಬಳಿಯಿರುವ ತನ್ನ  ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು India Today ವರದಿ ಮಾಡಿದೆ.

 ಪೊಲೀಸರ ಪ್ರಕಾರ, ಶಹಾನಾ ಗುರುವಾರ ರಾತ್ರಿ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಹಾನಾ ಅವರ ಪತಿ ಸಜ್ಜಾದ್ (31 ವರ್ಷ ) ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕೋಝಿಕ್ಕೋಡ್ ನಗರದಿಂದ 14 ಕಿಮೀ ದೂರದಲ್ಲಿರುವ ಪರಂಬಿಲ್ ಬಝಾರ್‌ನಲ್ಲಿರುವ ತನ್ನ ನಿವಾಸದಲ್ಲಿ  ಕಿಟಕಿಯ ಸರಳುಗಳಿಗೆ  ನೇಣು ಬಿಗಿದ ಸ್ಥಿತಿಯಲ್ಲಿ ಶಹಾನಾ ಪತ್ತೆಯಾಗಿದ್ದಾರೆ. ಪ್ರಕರಣದ ಸುತ್ತ ಸಾಕಷ್ಟು ಅನುಮಾನಗಳು ಮೂಡಿವೆ.

"ಶಹಾನಾ ಗುರುವಾರ ಸಂಜೆ ನಮ್ಮನ್ನು ಸಂಪರ್ಕಿಸಿದರು. ಅಂದು ಆಕೆಯ 20 ನೇ ಹುಟ್ಟುಹಬ್ಬವಾಗಿತ್ತು. ಆಕೆ  ತನ್ನ ಹುಟ್ಟುಹಬ್ಬವನ್ನು ಆಚರಿಸಲು ತನ್ನ ಮನೆಗೆ ಬರುವುದಾಗಿ ಹೇಳಿದ್ದಳು. ಅವಳು ತುಂಬಾ ಸಂತೋಷವಾಗಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನನಗೆ ಅನಿಸುವುದಿಲ್ಲ" ಎಂದು ಶಹಾನಾ ಅವರ ತಾಯಿ ಹೇಳಿದರು ಎನ್ನುವುದಾಗಿ 'ಮಾತೃಭೂಮಿ' ಪತ್ರಿಕೆ ವರದಿ ಮಾಡಿದೆ.

ಶಹಾನಾಳನ್ನು ಆಕೆಯ ಪತಿ ಸಜ್ಜಾದ್ ಕೊಲೆ ಮಾಡಿದ್ದಾನೆ ಎಂದು ಶಹಾನಾ ತಾಯಿ ಆರೋಪಿಸಿದ್ದಾರೆ. ಶಹಾನಾ  ಜಾಹೀರಾತಿಗಾಗಿ ಪಡೆದ ಚೆಕ್ ಅನ್ನು ನೀಡಲು ನಿರಾಕರಿಸಿದರೆ ಆಕೆಯನ್ನು ಕೊಲ್ಲುವುದಾಗಿ ಸಜ್ಜಾದ್ ಬೆದರಿಕೆ ಹಾಕಿದ್ದ ಎಂದು ತಾಯಿ ಹೇಳಿದ್ದಾರೆ.

ಶಹಾನಾ ಒಂದೂವರೆ ವರ್ಷದ ಹಿಂದೆ ತಮ್ಮ ಸಂಬಂಧಿಯೇ ಆದ ಕೋಝಿಕೋಡ್ ಮೂಲದ ಸಜ್ಜಾದ್ ಎಂಬಾತನನ್ನು ಮದುವೆಯಾಗಿದ್ದಳು. ವಿವಾಹದ ವೇಳೆ ಸಜ್ಜಾದ್ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದರು.


 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)