varthabharthi


ಕ್ರೀಡೆ

ಆ್ಯಂಡ್ರೂ ಸೈಮಂಡ್ಸ್ ನಿಧನಕ್ಕೆ ಸಚಿನ್, ಹರ್ಭಜನ್ ಸಹಿತ ಮಾಜಿ ಕ್ರಿಕೆಟಿಗರ ಸಂತಾಪ

ವಾರ್ತಾ ಭಾರತಿ : 15 May, 2022

Photo: twitter

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ರವಿವಾರ ತಿಳಿಸಿದೆ. ಸೈಮಂಡ್ಸ್ ನಿಧನದ ಸುದ್ದಿ ಹೊರಬಿದ್ದ ತಕ್ಷಣ ಅವರ ಸಮಕಾಲೀನರು ಟ್ವಿಟರ್‌ ನಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಆಲ್‌ರೌಂಡರ್‌ಗೆ ಗೌರವ ಸಲ್ಲಿಸಿದರು.

ಸೈಮಂಡ್ಸ್ ಪತ್ನಿ ಲಾರಾ ಹಾಗೂ  ಚಿಕ್ಕ ಮಕ್ಕಳಾದ ಕ್ಲೋಯ್ ಮತ್ತು ಬಿಲ್ಲಿ ಅವರನ್ನು ಅಗಲಿದ್ದಾರೆ.

ಹಲವಾರು ಕ್ರಿಕೆಟಿಗರು ಟ್ವಿಟರ್‌ನಲ್ಲಿ ಸೈಮಂಡ್ಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ಆ್ಯಂಡ್ರೂ ಸೈಮಂಡ್ಸ್ ನಿಧನ ನಮಗೆಲ್ಲರಿಗೂ ಆಘಾತಕಾರಿ ಸುದ್ದಿಯಾಗಿದೆ. ಅವರು ಅದ್ಭುತ ಆಲ್ ರೌಂಡರ್ ಮಾತ್ರವಲ್ಲ ಮೈದಾನದಲ್ಲಿ ಮಿಂಚಿನ ವೇಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು.  ಮುಂಬೈ ಇಂಡಿಯನ್ಸ್ ನೊಂದಿಗೆ ನಾವು ಒಟ್ಟಿಗೆ ಕಳೆದ ಸಮಯದ ಸ್ಮರಣೀಯ  ನೆನಪು ಸದಾ ಹಸಿರಾಗಿದೆ'' ಎಂದು ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ.

"ಆ್ಯಂಡ್ರೂ ಸೈಮಂಡ್ಸ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರು ಬೇಗನೆ ಎಲ್ಲರನ್ನೂ ಅಗಲಿದ್ದಾರೆ. ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪ, ಅಗಲಿದ ಆತ್ಮಕ್ಕೆ ಪ್ರಾರ್ಥನೆ'' ಎಂದು ಭಾರತದ ಮಾಜಿ ಬೌಲರ್ ಹರ್ಭಜನ್ ಸಿಂಗ್ ಟ್ವೀಟಿಸಿದ್ದಾರೆ.

"ಎಚ್ಚರಗೊಂಡಾಗ ಭಯಾನಕ ಸುದ್ದಿ ಕೇಳಿದೆ. ಈ ಸುದ್ದಿ ಕೇಳಿ  ತುಂಬಾ ಬೇಸರವಾಯಿತು. ನಾವೆಲ್ಲರೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ ಗೆಳೆಯ'' ಎಂದು ಆಸ್ಟ್ರೇಲಿಯದ ಮಾಜಿ ಆಟಗಾರ ಜೇಸನ್ ಗಿಲ್ಲೆಸ್ಪಿ ಟ್ವೀಟಿಸಿದ್ದಾರೆ.

"ನಿಮಗಾಗಿ ಏನು ಬೇಕಾದರೂ ಮಾಡುವ, ನಿಮ್ಮ ಅತ್ಯಂತ ನಿಷ್ಠಾವಂತ, ವಿನೋದ, ಪ್ರೀತಿಯ ಸ್ನೇಹಿತನ ಬಗ್ಗೆ ಯೋಚಿಸಿ, ಅದು ರಾಯ್'' ಎಂದು ಆಸ್ಟ್ರೇಲಿಯದ ಮಾಜಿ ವಿಕೆಟ್ ಕೀಪರ್ ಆ್ಯಡಂ ಗಿಲ್ ಕ್ರಿಸ್ಟ್ ಟ್ವೀಟಿಸಿದ್ದಾರೆ.

"ಭಾರತದಲ್ಲಿ ಮುಂಜಾನೆ ಎಚ್ಚರವಾಗುವಾಗಲೇ ಆಘಾತಕಾರಿ ಸುದ್ದಿ.  ನನ್ನ ಆತ್ಮೀಯ ಗೆಳೆಯನಿಗೆ ಶಾಂತಿ ಲಭಿಸಲಿ. ಅಂತಹ ದುರಂತ ಹೊಸತು'' ಎಂದು ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟ್ವಿಟಿಸಿದರು.

"ಆ್ಯಂಡ್ರೂ ಸೈಮಂಡ್ಸ್ ನಿಧನವಾಗಿರುವ ಸುದ್ದಿ ಕೇಳಿ ದುಃಖವಾಗಿದೆ. ಅವರ ಪರಿವಾರ, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಸಂತಾಪ ಸೂಚಿವೆ''ಎಂದು ಭಾರತದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಟ್ವೀಟಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)