ದೋಹಾ: ಸೌತ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಗೆ ನೂತನ ಪದಾಧಿಕಾರಿಗಳ ಆಯ್ಕೆ
ಖತರ್, ಮೇ 15: ದೋಹಾದಲ್ಲಿರುವ ಸೌತ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ (ಎಸ್ಕೆಎಂಡಬ್ಲ್ಯುಎ) ಇದರ 2022-24ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಅಬ್ದುರ್ರಝಾಕ್ ಪುತ್ತೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ 29ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಾಝಿಲ್ ಜಮೀಲ್ ಅವರ ಕಿರಾಅತ್ ನೊಂದಿಗೆ ಸಭೆ ಆರಂಭಗೊಂಡಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿರ್ಗಮನ ಅಧ್ಯಕ್ಷ ಅಬ್ದುಲ್ ಮಜೀದ್ ಸಂಘದ 2020-21ನೇ ಸಾಲಿನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ನಾಸಿರ್ ಉಳ್ಳಾಲ ಮತ್ತು ಸತ್ತಾರ್ ಮೊಂಟೆಪದವು ಕಳೆದ ಸಾಲಿನ ವಾರ್ಷಿಕ ಮತ್ತು ಹಣಕಾಸು ವರದಿ ಮಂಡಿಸಿದರು.
ಈ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, 2022-24ನೇ ಸಾಲಿನ ಅಧ್ಯಕ್ಷರಾಗಿ ಅಬ್ದುರ್ರಝಾಕ್ ಪುತ್ತೂರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಬ್ದುಲ್ ಖಾಸಿಂ ಉಡುಪಿ ಮತ್ತು ಮುಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇಮ್ರಾನ್ ಬಂಟ್ವಾಳ, ಜತೆ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಎಂ.ಎನ್., ಖಜಾಂಚಿಯಾಗಿ ಅಬ್ದುನ್ನಾಸಿರ್ ಉಳ್ಳಾಲ, ಸಹಾಯಕ ಖಜಾಂಚಿಯಾಗಿ ಅಫ್ಝಲ್ ಜಮೀಲ್, ಈವೆಂಟ್ ಕಾರ್ಯದರ್ಶಿಗಳಾಗಿ ಶಮೀರ್ ಮಾಹಿನ್, ಮನ್ಸೂರ್, ಸತ್ತಾರ್, ಇಮ್ತಿಯಾಝ್ ಮತ್ತು ಇಮ್ರಾನ್ ಹಾಗೂ ಸಲಹಾ ಸಮಿತಿಯ ಸದಸ್ಯರಾಗಿ ಅಬ್ದುಲ್ ಮಜೀದ್ ಮೂಡುಬಿದಿರೆ, ಫೀರೋಝ್ ಕುಂದಾಪುರ, ಇಬ್ರಾಹೀಂ ಬ್ಯಾರಿ, ಅಬ್ದುಲ್ ಮಜೀದ್ ಹಳೆಯಂಗಡಿ, ಅಬ್ದುಲ್ಲಾ ಮೋನು ಮತ್ತು ಇಸ್ಮಾಯೀಲ್ ಜೋಕಟ್ಟೆ ಆಯ್ಕೆಯಾದರು.
ಈವೆಂಟ್ ಸಂಯೋಜಕರಾಗಿ ನಾಸಿರ್ ಮಂಜೇಶ್ವರ, ಸುಹೈಬ್ ಅಹ್ಮದ್, ರಿಝ್ವಾನ್ ಅಹ್ಮದ್, ಅಬ್ದುಲ್ ಹಮೀದ್ ಹಳೆಯಂಗಡಿ, ಅಬ್ದುಲ್ ಖಾದರ್ ಹನಾನ್, ರಶೀದ್ ಕಕ್ಕಿಂಜೆ, ಅಮೀರ್ ಹಂಝ, ಆದಂ, ಸಲೀಂ ಉಳ್ಳಾಲ, ಇಲ್ಯಾಸ್ ಬ್ಯಾರಿ, ಅಬ್ಬು ಜೋಕಟ್ಟೆ, ಅಬ್ದುರ್ರಶೀದ್, ಅಬ್ದುಲ್ ಖಾದರ್ ಜೀಲಾನಿ ಆಯ್ಕೆಯಾದರು.
ಅಬ್ದುಲ್ ಖಾಸಿಂ ಉಡುಪಿ ಸ್ವಾಗತಿಸಿದರು. ಅಬ್ದುರ್ರಝಾಕ್ ವಂದಿಸಿದರು.