ಸುಳ್ಯ: ಕಾರಿನಲ್ಲಿ ದನ ಅಕ್ರಮ ಸಾಗಾಟ ಆರೋಪ; ಓರ್ವ ಸೆರೆ
ಸುಳ್ಯ: ಕಾರಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಬಂಧಿತನನ್ನು ವಿನಯ ಎಂದು ಗುರುತಿಸಲಾಗಿದೆ.
ಮಾರುತಿ 800 ಕಾರಿನಲ್ಲಿ ದನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಹಿಂದುತ್ವ ಸಂಘಟನೆ ಕಾರ್ಯಕರ್ತರು ಬೂಡು ಸೇತುವೆ ಸಮೀಪ ಕಾರನ್ನು ತಡೆದು ನಿಲ್ಲಿಸಿ, ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಅಕ್ರಮವಾಗಿ ದನ ಸಾಗಾಟ ಮಾಡುತಿದ್ದ ಆರೋಪದಲ್ಲಿ ವಿನಯ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ದನವನ್ನು ಆಲಂಗಾರಿನಿಂದ ಬೆಳ್ಳಾರೆ ಮಾರ್ಗವಾಗಿ ಮಕರುಂಜಕ್ಕೆ ಕೊಂಡೊಯ್ಯತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story