varthabharthi


ಕ್ರೀಡೆ

ಬೌಲ್ಟ್, ಪ್ರಸಿದ್ಧ ಕೃಷ್ಣ , ಮೆಕಾಯ್‌ಗೆ ತಲಾ 2 ವಿಕೆಟ್

ಲಕ್ನೋ ವಿರುದ್ಧ ರಾಜಸ್ಥಾನಕ್ಕೆ ಗೆಲುವು

ವಾರ್ತಾ ಭಾರತಿ : 15 May, 2022

Photo:twitter

    ಮುಂಬೈ, ಮೇ 15: ದೀಪಕ್ ಹೂಡಾ ಅರ್ಧಶತಕದ(59 ರನ್, 39 ಎಸೆತ, 5 ಬೌಂಡರಿ, 2 ಸಿಕ್ಸರ್)ಕೊಡುಗೆಯ ಹೊರತಾಗಿಯೂ ವೇಗದ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್(2-18), ಪ್ರಸಿದ್ಧ ಕೃಷ್ಣ(2-32) ಹಾಗೂ ಒಬೆಡ್ ಮೆಕಾಯ್(2-35) ದಾಳಿಗೆ ತತ್ತರಿಸಿದ ಲಕ್ನೊ ಸೂಪರ್ ಜೈಂಟ್ಸ್ 24 ರನ್‌ಗಳ ಅಂತರದಿಂದ ಶರಣಾಯಿತು.

ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಐಪಿಎಲ್‌ನ 63ನೇ ಪಂದ್ಯದಲ್ಲಿ ಗೆಲ್ಲಲು 179 ರನ್ ಗುರಿ ಬೆನ್ನಟ್ಟಿದ ಲಕ್ನೊ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಲಕ್ನೊದ ಪರ ಕೃನಾಲ್ ಪಾಂಡ್ಯ(25 ರನ್)ಹಾಗೂ ಮಾರ್ಕಸ್ ಸ್ಟೋನಿಸ್(27 ರನ್ )ಎರಡಂಕೆಯ ಸ್ಕೋರ್ ಗಳಿಸಿದರು. ಯಜುವೇಂದ್ರ ಚಹಾಲ್(1-42)ಹಾಗೂ ಆರ್.ಅಶ್ವಿನ್(1-24) ತಲಾ ಒಂದು ವಿಕೆಟ್ ಪಡೆದರು.

 ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಅಗ್ರ ಸರದಿಯ ಆಟಗಾರರಾದ ಯಶಸ್ವಿ ಜೈಸ್ವಾಲ್(41 ರನ್, 29 ಎಸೆತ), ದೇವದತ್ತ ಪಡಿಕ್ಕಲ್(39 ರನ್,18 ಎಸೆತ) ಹಾಗೂ ಸಂಜು ಸ್ಯಾಮ್ಸನ್(32ರನ್,24 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)