ರಾಷ್ಟ್ರೀಯ
ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೇ ಮಾಡಿದ ಅಧಿಕಾರಿಯನ್ನು ತೆಗೆದುಹಾಕಿದ ವಾರಣಾಸಿ ಕೋರ್ಟ್
ವಾರ್ತಾ ಭಾರತಿ : 17 May, 2022

ವಾರಣಾಸಿ: ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೇ ಮಾಡಿದ ಬಳಿಕ ಅಲ್ಲಿ ʼಶಿವಲಿಂಗʼ ದೊರೆತಿದೆ ಎಂಬ ವಿಚಾರವೊಂದು ಮುನ್ನೆಲೆಗೆ ಬಂದಿತ್ತು. ಆ ಪ್ರದೇಶವನ್ನು ಸೀಲ್ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಸದ್ಯ ಈ ಕುರಿತ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ಚರ್ಚೆಯಲ್ಲಿದೆ. ಈ ನಡುವೆ ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೇ ಮಾಡಿದ ಅಧಿಕಾರಿಯನ್ನು ವಾರಣಾಸಿ ಕೋರ್ಟ್ ತೆಗೆದುಹಾಕಿದೆ ಎಂದು ತಿಳಿದು ಬಂದಿದೆ.
ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೇ ಮಾಡಲು ವಾರಣಾಸಿ ಕೋರ್ಟ್ ಅಡ್ವೊಕೇಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾರನ್ನು ನೇಮಿಸಿತ್ತು. ಸದ್ಯ ಈ ನೇಮಕವನ್ನು ರದ್ದುಗೊಳಿಸಿದ್ದು, ಎರಡು ದಿನಗಳ ಒಳಗಡೆ ವರದಿ ನೀಡಲು ಸಮಿತಿಗೆ ಆದೇಶಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)