varthabharthi


ಸಿನಿಮಾ

ಪ್ಯಾನ್‌ ಇಂಡಿಯಾ ಕನ್ನಡ ಚಿತ್ರಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ: 'ಚಾರ್ಲಿ 777' ಗೆ ಮೆಚ್ಚುಗೆಯ ಮಹಾಪೂರ

ವಾರ್ತಾ ಭಾರತಿ : 17 May, 2022

PHoto: Twitter

ಬೆಂಗಳೂರು: ರಕ್ಷಿತ್‌ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ʼ777 ಚಾರ್ಲಿʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಯಲ್ಲಿ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

ಟ್ರೇಲರ್‌ ಬಿಡುಗಡೆ ಆದ ಒಂದೇ ದಿನದಲ್ಲಿ ಒಟ್ಟಾರೆ 13 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದಿದೆ. ಕನ್ನಡದಲ್ಲಿ ಬಿಡುಗಡೆಯಾದ ಟ್ರೇಲರ್‌ 4.5 ಮಿಲಿಯನ್‌ ಬಾರಿ ವೀಕ್ಷಣೆಯಾಗಿದ್ದು, ಹಿಂದಿಯಲ್ಲೂ ಸುಮಾರು 4.4 ಮಿಲಿಯನ್‌ ವೀಕ್ಷಣೆ ಸಿಕ್ಕಿದೆ. ಇನ್ನು ತೆಲುಗಲ್ಲಿ 2.4 ಮಿಲಿಯನ್‌ ಹಾಗೂ ತಮಿಳು, ಮಳೆಯಾಲಂನಲ್ಲಿ ಸರಿಸುಮಾರು 1.5 ಮಿಲಿಯನ್‌ ನಷ್ಟು ವೀಕ್ಷಣೆಗಳು ಲಭ್ಯವಾಗಿದೆ.

ತೆಲುಗು ಟ್ರೇಲರ್‌ ಅನ್ನು ಸಾಯಿ ಪಲ್ಲವಿ ಬಿಡುಗಡೆ ಮಾಡಿದ್ದು, ತಮಿಳಿನಲ್ಲಿ ನಟ ಧನುಷ್‌ ಬಿಡುಗಡೆ ಮಾಡಿದ್ದಾರೆ, ಮಳೆಯಾಲಂ ಟ್ರೇಲರ್‌ ಪೃಥ್ವಿರಾಜ್ ಬಿಡುಗಡೆ ಮಾಡಿದ್ದರೆ, ಸಾಯಿ ಪಲ್ಲವಿಗೆ ರಾಣಾ ದಗ್ಗುಬಾಟಿ, ಲಕ್ಷ್ಮಿ ಮಂಚು ಸಾಥ್‌ ನೀಡಿದ್ದಾರೆ.

ಟ್ರೇಲರಿನಲ್ಲಿ ತಮಿಳು ನಟ ಬಾಬಿ ಸಿಂಹ, ಒಂದು ಮೊಟ್ಟೆಯ ಕತೆ ಖ್ಯಾತಿಯ ರಾಜ್‌ ಬಿ ಶೆಟ್ಟಿ ಮೊದಲಾದವರು ರಕ್ಷಿತ್‌ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

ಚಾರಲಿ ಚಿತ್ರದ ಟ್ರೇಲರ್‌ ನಾಯಕ ಹಾಗೂ ನಾಯಿಯೊಂದಿಗಿನ ಸಂಬಂಧವನ್ನು ಹಿಡಿದಿಟ್ಟಿದ್ದು, ಭಾವನಾತ್ಮಕವಾಗಿ ಹೆಣೆಯಲಾಗಿದೆ. ಪ್ರಾಣಿಪ್ರಿಯರಿಗೆ, ಅದರಲ್ಲೂ ಶ್ವಾನಪ್ರಿಯರು ಈ ಚಿತ್ರಕ್ಕೆ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

ಈಗಾಗಲೇ ಟ್ರೇಲರ್‌ ಕುರಿತು ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರರಂಗದ ಗಣ್ಯರಿಂದಲೂ ಚಾರ್ಲಿ 777 ಟ್ರೇಲರ್‌ಗೆ ಬಹುಪರಾಕ್‌ ಸಿಕ್ಕಿದೆ. ಸಿನೆಮಾ ಸಾಹಿತಿ ಕವಿರಾಜ್‌, ಕಿಚ್ಚ ಸುದೀಪ್‌, ರಾಣಾ ದಗ್ಗುಬಾಟಿ , ನಿರುಪಮ್‌ ಭಂಡಾರಿ, ಸಂತೋಷ್‌ ಆನಂದ್‌ರಾಮ್‌‌, ಪವನ್‌ ಒಡೆಯರ್‌, ಸಂಗೀತಗಾರ ತಮನ್‌ ಎಸ್ ಸೇರಿದಂತೆ ಹಲವು ತಾರೆಯರು ರಕ್ಷಿತ್‌ ಶೆಟ್ಟಿ ಅಭಿನಯದ ಚಿತ್ರದ ಟ್ರೇಲರ್‌ಗೆ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

ಕೆಜಿಎಫ್‌ ಬಳಿಕ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ಚಿತ್ತ ಹರಿಸಿದ್ದು, ಕನ್ನಡದ ಪ್ಯಾನ್‌ ಇಂಡಿಯಾ ಸಿನೆಮಾಗಳನ್ನು ಕುತೂಹಲದಿಂದ ನೋಡುತ್ತಿದೆ. ಕಿಚ್ಚ ಸುದೀಪ್‌ ಅಭಿನಯದ ʼವಿಕ್ರಾಂತ್ ರೋಣʼವು ದೇಶಾದ್ಯಂತ ಕುತೂಹಲಗಳನ್ನು ಕೆರಳಿಸಿದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)