ಖಾಸಗಿ ಪದಪೂರ್ವ ಕಾಲೇಜುಗಳ ಮಾನ್ಯತೆ ಖಚಿತ ಪಡಿಸಿಕೊಳ್ಳಲು ಪೋಷಕರಿಗೆ ಸೂಚನೆ
ಉಡುಪಿ : ರಾಜ್ಯದ ಹೈಕೋರ್ಟ್ ಆದೇಶದಂತೆ, ಜಿಲ್ಲೆಯಲ್ಲಿರುವ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದಂತೆ, ಆಯಾ ಕಾಲೇಜುಗಳು ಅಸ್ತಿತ್ವದಲ್ಲಿವೆಯೇ ಅಥವಾ ಮಾನ್ಯತೆ ಪಡೆದಿವೆಯೇ ಎಂಬ ಬಗ್ಗೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಖಚಿತಪಡಿಸಿಕೊಂಡ ನಂತರವೇ ಪಿಯುಸಿ ತರಗತಿಗಳಿಗೆ ದಾಖಲಾಗುವಂತೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story