varthabharthi


ದಕ್ಷಿಣ ಕನ್ನಡ

ಐಕಳ: ಭಾರೀ ಗಾಳಿಗೆ ರಸ್ತೆಗೆ ಅಡ್ಡವಾಗಿ ಉರುಳಿದ ಬೃಹತ್ ಮರ

ವಾರ್ತಾ ಭಾರತಿ : 18 May, 2022

ಕಿನ್ನಿಗೋಳಿ, ಮೇ 18: ಇಂದು ಮುಂಜಾನೆ ಬೀಸಿದ ಭಾರೀ ಗಾಳಿಗೆ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ ಮುತ್ತಾಯಕೆರೆಯ ಬಳಿ ಬೃಹದಾಕಾರದ ಮರವೊಂದು ರಸ್ತೆಗಡ್ಡವಾಗಿ ಉರುಳಿದೆ.

ಮರವು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದಾಗಿ ವಿದ್ಯುತ್ ವ್ಯತ್ಯಯವಾಗಿತ್ತು. ಬೆಳ್ಳಂಬೆಳೆಗ್ಗೆಯಾಗಿದ್ದ ಕಾರಣ ರಸ್ತೆಯಲ್ಲಿ ವಾಹನ, ಜನ ಸಂಚಾರ ಕಡಿಮೆ‌ ಇತ್ತು. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಗ್ರಾಮ‌ ಪಂಚಾಯತ್ ವತಿಯಿಂದ ಮರ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)